ಬಳ್ಳಾರಿ

ಅಜ್ಞಾನ ಹೋಗಲಾಡಿಲು ಪ್ರಯತ್ನಿಸಿದ ಸಂತ ಸೇವಾಲಾಲ

ಅಜ್ಞಾನ ಹೋಗಲಾಡಿಲು ಪ್ರಯತ್ನಿಸಿದ ಸಂತ ಸೇವಾಲಾಲ

ಸಿರುಗುಪ್ಪ 15: ಜನರಲ್ಲಿನ ಅಜ್ಞಾನ, ಅಂಧಕಾರ, ಅಸಮಾನತೆ, ಜಾತಿ ಪದ್ಧತಿ ಮತ್ತು ಧರ್ಮಾಂದತೆ ತೊಡೆದುಹಾಕಲು ಮಹಾ ಸಂತ ಸೇವಾಲಾಲ್ ಅವರು ಶ್ರಮಿಸಿದರು ಎಂದು ತಹಶೀಲ್ದಾರ್ ಸತೀಶ್ ಬಿ ಕೂಡಲಗಿ ಹೇಳಿದರು.

ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಕರ್ನಾಟಕ ಸರ್ಕಾರ ತಾಲೂಕು ಆಡಳಿತ ತಾಲ್ಲೂಕು ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಸಹಯೋಗದಿಂದ ಮಾನವತೆಯ ಮಹಾಸಂತ ಮಹಾರಾಜ ಸೇವಾಲಾಲ್ 283ನೇ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎಲ್ಲರೂ ವಿದ್ಯಾವಂತರಾಗಿ ಸೇವಾಲಾಲ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಪಾಲಿಸಬೇಕೆಂದರು. ವಕೀಲರಾದ ವೆಂಕಟೇಶ ನಾಯಕ್ , ಸೇವಾಲಾಲ್ ಜೀವನಚರಿತ್ರೆ ಹುಟ್ಟು ಸಾವುಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು ಸಿಪಿಐಟಿ ಆರ್ ಪವಾರ್ ಶಾಸಕ ಎಂ ಎಸ್ ಸೋಮಲಿಂಗಪ್ಪ ಅವರ ಪುತ್ರ  ಸಿದ್ದಪ್ಪ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಶಾಸೂ ಮೊದೀನ್ ಮಾತನಾಡಿ, ಸೇವಾಲಾಲ್ ಮತ್ತು ಜಗನ್ಮಾತೆ ಮರಿಯಮ್ಮಳ ಮಂದಿರಗಳ ಅಭಿವೃದ್ಧಿಗೆ 68 ಲಕ್ಷರೂ.  ಸರ್ಕಾರ ಅನುದಾನ ಮಂಜೂರು ಮಾಡಿದೆ ಎಂದರು.

 ದೈಹಿಕ ಶಿಕ್ಷಕ ಬಿ. ಈರಣ್ಣ ನಿರೂಪಿಸಿದರು. ಸಹಾಯಕ ಕೃಷಿ ನಿರ್ದೇಶಕ ಎನ್. ನಜೀರ್ ಅಹ್ಮದ್, ಲೋಕಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯ ಎ.ಅಬ್ದುಲ್ ನಬಿ, ಜಿಪಂ ಸದಸ್ಯೆ ರಾಧಾ ಧರಪ್ಪ ನಾಯಕ್, ಬಂಜಾರ ಸಮಾಜದ ಭೀಮಾ ನಾಯಕ್ ನಗರಸಭೆ ಸದಸ್ಯ ಮಹಾದೇವ, ತಾಪಂ ಅಲ್ಲಾಭಕ್ಷಿ ಬಂಜಾರ ಸಮುದಾಯದ ಮುಖಂಡರು ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು. ತಹಶೀಲ್ದಾರ್ ಎಲ್ಲಾ ಅಧಿಕಾರಿಗಳು ಸಿದ್ಧಪ್ಪ ಅಬ್ದುಲ್ ನಬಿ ಅತಿಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ಸುದ್ದಿ ಓದಿ