ಸಾವಿನಲ್ಲಿಯೂ ಸಾರ್ಥಕತೆ ಮೇರೆದ ಶಂಕ್ರವ್ವ
ಮುಂಡಗೋಡ 09 : ಪಟ್ಟಣದ ಇಂದಿರಾನಗರ ನಿವಾಸಿಯಾದ್ ಶಂಕ್ರವ್ವ ದೇವಪ್ಪ ಕುರುಬರ ಅಕ್ಟೋಬರ್ 4ರಂದು ಇಲ್ಲಿನ ಟ್ರಿನಿಟಿ ಹಾಲ್ ಎದುರುಗಡೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು.ಮುಂಡಗೋಡ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು
ಪಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶಂಕ್ರವ್ವ ದೇವಪ್ಪ ಕುರುಬರ ಅವರ ಮರಣದ ನಂತರ ಅವರ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಎರಡು ಕಣ್ಣು, ಕಿಡ್ನಿಗಳನ್ನು ದಾನ ಮಾಡಲಾಗಿದೆ ಎಂದು ಶಂಕ್ರವ್ವ ಅವರ ಸಂಬಂಧಿ ಮಂಜುನಾಥ ಕುರುಬರ ತಿಳಿಸಿದ್ದಾರೆ.