ಸಂಕೇಶ್ವರ ಹೈವೇ ದರೋಡೆ ಪ್ರಕರಣ : ನಿಜವಾದ ಆರೋಪಿತರ ಬಂಧನ
ಸಂಕೇಶ್ವರ 22: ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹೈವೇ ರಾಬರಿ ಪ್ರಕಾರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದೆ. ಬಂಧಿತ ಸಂಶಯಾಸ್ಪದ ವ್ಯಕ್ತಿಗಳು ಬೇರೆಯಾಗಿದ್ದು, ನಿಜವಾದ ಆರೋಪಿಗಳನ್ನು ಬಂಧಿಸಿ 1.17 ಕೋಟಿ ರೂಪಾಯಿ ಹಣ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಡಾ. ಭೀಮಾಶಂಕರ್ ಗುಳೇದ ತಿಳಿಸಿದರು.
ಶುಕ್ರವಾರ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಂಕೇಶ್ವರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಹೈವೇ ರಾಬರಿಗೆ ಸಂಬಂಧಿಸಿದಂತೆ ವಾಹನದಲ್ಲಿದ್ದ ಆರೀಫ್, ಸೂರಜ್ ಮತ್ತು ಅಜಯ್ ಮೂವರನ್ನ ತನಿಖೆ ಮಾಡಲಾಗಿದೆ. ಕಾರಿನಲ್ಲಿ ಹಣ ಸಿಕ್ಕಿದ್ದರಿಂದ ಇವರನ್ನ ತೀವ್ರ ವಿಚಾರಣೆ ಮಾಡಿದಾಗ ಇವರು ಹೇಳಿದ ವಿಚಾರ ಬೇರೆಯಾಗಿದ್ದು, ತನಿಖೆ ಬದಲಿಸಿ ಬೇರೆಯವರು ಪಾಲ್ಗೊಂಡ ವಿಚಾರ ಮಾಡಿ ಬೆಳಕಿಗೆ ಬಂದಿದೆ.
ಮತ್ತಷ್ಟು ಪರೀಶೀಲನೆ ಮಾಡಿದಾಗ ಫಾಲೋ ಮಾಡಿದ ವಾಹನಕ್ಕೂ ರಾಬರಿ ಆಗಿದ್ದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಕಮತನೂರ-ನೆರ್ಲಿ ಬಳಿ ವಾಹನ ಸಿಕ್ಕಿತ್ತು. ಅಲ್ಲಿಯೇ ಮತ್ತೊಂದು ಎರ್ಟಿಗಾ ಕಾರು ಹೋಗುವುದು ಗೊತ್ತಾಗಿತ್ತು. ಮಹಾರಾಷ್ಟ್ರಕ್ಕೆ ಹೋಗಿದ್ದ ನಿಜವಾದ ವಾಹನವನ್ನು ಒಂದು ತಂಡ ರಚನೆ ಮಾಡಿ ತನಿಖೆ ಪತ್ತೆ ಹಚ್ಚಲಾಗಿದೆ.
ಎರ್ಟಿಗಾ ಕಾರಿನ ನಂಬರ್ ಕೂಡ ಫೇಕ್ ಮಾಡಿರುತ್ತಾರೆ. ಕಾರಿನ ಕಲರ್ ಮತ್ತು ನಂಬರ್ ಮೇಲೆ ಪತ್ತೆಯಾಗಿದ್ದು, ಭರತ್ ಹಳೆಯ ಡ್ರೈವರ್ ನವನೀತ್ ಮತ್ತು ಸೂರಜ್ಗೆ ಕಾಂಟೆಕ್ಟ್ ಇದ್ರೂ. ಕೈಗೆ ಸಿಕ್ಕ ಹಣ ತೆಗೆದುಕೊಂಡು ಪರಾರಿಯಾಗಿರುವುದು ತಿಳಿದು ಬಂದಿದೆ. ಸಾಂಗ್ಲಿಯಲ್ಲಿ ಹದಿನಾರು ಲಕ್ಷ ಗೋಡೌನ್ನಲ್ಲಿ ಇಟ್ಟು ಹೋಗಿರುತ್ತಾರೆ. ಈಗಾಗಲೇ ಸೂರಜ್ ಮತ್ತು ನವನೀತನ್ನನು ವಶಕ್ಕೆ ಪಡೆದು 1.17 ಕೋಟಿ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.