ಸಂಕಲ್ಪ ಸಪ್ತಾಹ ಕಾರ್ಯಕ್ರಮ
ಮುಂಡಗೋಡ 10: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆ ಬ್ಲಾಕ್ ಕಾರ್ಯಕ್ರಮದ ಯೋಜನೆಯಡಿ ತಾಲೂಕಿನ ಹುನಗುಂದ ಗ್ರಾಮದ ವಿಠೋಬಾ ಮಂದಿರದಲ್ಲಿ ಸಂಕಲ್ಪ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹುನಗುಂದ ವಲಯದ ಮೇಲ್ವಿಚಾರಕಿ ರೂಪಾ ಅಂಗಡಿ ಕಾರ್ಯಕ್ರಮದ ಉದ್ದೇಶ, ಮಕ್ಕಳ ಪೋಷಣೆ, ಪೌಷ್ಟಿಕ ಆಹಾರ, ಮಕ್ಕಳ ಪೌಷ್ಟಿಕ ಮಟ್ಟ, ಎನ್.ಆರ್.ಸಿ. ಕೇಂದ್ರ, ಕೈತೋಟದ ಮಹತ್ವ, ಸಿರಿಧಾನ್ಯಗಳ ಮಹತ್ವ, ಸೀಮಂತ, ಅನ್ನ ಪ್ರಾಶನದ ಕುರಿತು ಮಾಹಿತಿ ನೀಡಿದರು.
ಗ್ರಾ.ಪಂ. ಮಾಜಿ ಸದಸ್ಯ ರಾಮಣ್ಣ ಲಮಾಣಿ ಮಾತನಾಡಿ ಮನೆಯಲ್ಲಿಯೆ ಸಿದ್ಧಪಡಿಸಿದ ಆಹಾರ ಸೇವಿಸಬೇಕು. ಮಕ್ಕಳನ್ನು ತಪ್ಪದೆ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಬೇಕು. ಅಂಗಡಿಗಳ ತಿಂಡಿ ತಿನಿಸುಗಳನ್ನು ಮಕ್ಕಳಿಗೆ ತಿನ್ನಿಸಬಾರದು ಎಂದರು. ಬಸವರಾಜ ಆಸ್ತಕಟ್ಟಿ ಮಾತನಾಡಿ ಅತ್ತಿವೇರಿ ಗೌಳಿದಡ್ಡಿಯಲ್ಲಿ ಇರುವ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪೌಷ್ಟಿಕ ಮಟ್ಟ ಗುರುತಿಸಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಅವರಿಗೆ ಒದಗಿಸಬೇಕು ಎಂದರು.
ಕಾರ್ಯಕರ್ತೆಯರು ಮಕ್ಕಳ ಎತ್ತರ ಮತ್ತು ತೂಕ ಪ್ರದರ್ಶಿಸಿದರು. ಗ್ರಾ.ಪಂ. ಸದಸ್ಯರಾದ ಗಣೇಶ ಲಮಾಣಿ, ರಮೇಶ ಲಮಾಣಿ, ಶಹಜಾದಬಿ ಅಗಸರ, ಜೈಬುನಬಿ ಖಾಜಿ, ಗ್ರಾ.ಪಂ. ಸಿಬ್ಬಂದಿ, ಲಕ್ಷ್ಮಣ ಲಮಾಣಿ, ಬಸವರಾಜ ಮಳಲಿ, ಎಸ್ಡಿಎಮ್ಸಿ ಅಧ್ಯಕ್ಷ, ಗ್ರಂಥಪಾಲಕರು, ಗ್ರಂಥಾಲಯ ಮೇಲ್ವಿಚಾರಕಿ, ಎಮ್.ಬಿ.ಕೆ. ಹಾಗೂ ಎನ್.ಆರ್.ಎಲ್.ಎಮ್. ಸಿಬ್ಬಂದಿ, ಹುನಗುಂದ ಗ್ರಾ.ಪಂ.ವ್ಯಾಪ್ತಿಯ ಹುನಗುಂದ, ಅಗಡಿ, ಅತ್ತಿವೇರಿ, ಗೌಳಿದಡ್ಡಿ ಕೇಂದ್ರಗಳ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ನಾಗಮ್ಮ ನಿರೂಪಿಸಿ, ವಂದಿಸಿದರು. ಸಿರಿಧಾನ್ಯಗಳಿಂದ ತಯಾರಿಸಿ ಪ್ರದರ್ಶನಕ್ಕೆ ಇಟ್ಟ ನಾನಾ ಬಗೆಯ ತಿಂಡಿ ತಿನಿಸುಗಳು ಗಮನ ಸೆಳೆದವು.