ಕುಷ್ಟಗಿ

ಸಂಜೀವಿನಿ ಯೋಜನೆಯ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಗಾರ

ಸಂಜೀವಿನಿ ಯೋಜನೆಯ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಗಾರ

ಕುಷ್ಟಗಿ 29: ತಾಲೂಕಿನ ಗರ್ಜನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಲ ಸಂಜೀವಿನಿ ಯೋಜನೆಯ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಗಾರ ನಡೆಯಿತು.  

ಎಫ್‌ಇಎಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ವಾಸುದೇವಮೂರ್ತಿ ಮಾತನಾಡಿ ಜಲ ಆಯ-ವ್ಯಯ ಆಧರಿಸಿ ದಿಣ್ಣೆಯಿಂದ ತೆಗ್ಗಿನ ಕಡೆಗೆ ನೈಸರ್ಗಿಕ ಸಂಪನ್ಮೂಲಗಳ ವಿವಿಧ ಉಪಚಾರ ಕ್ರಮಗಳ ಜೊತೆ ಕ್ಲಾರ್ಟ ತಂತ್ರಾಂಶದ ಬಗ್ಗೆ ತಿಳಿಸಿದರು.  ಮಣ್ಣು ಮತ್ತು ನೀರು ಸಂರಕ್ಷಣೆಯ ಕಾಮಗಾರಿಗಳನ್ನು ವೈಜ್ಞಾನಿಕವಾದ ಪದ್ದತಿ ಮತ್ತು ಪ್ರಕ್ರಿಯೆಯಲ್ಲಿ ಜಿಐಎಸ್ , ಕ್ಲಾರ್ಟ, ದಿಶಾಂಕ, ಕೆಜಿಐಎಸ್, ತಂತ್ರಾಂಶದ ಮೂಲಕ ಯೋಜನೆ ರೂಪಿಸುವುದು. ಗೋಮಾಳ ಪ್ರದೇಶ ಅಭಿವೃದ್ಧಿ ಪಡಿಸುವುದು ಸೇರಿ ಕರಡು ಯೋಜನಾ ತಯಾರಿಕೆಯಲ್ಲಿ  ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸನ್ನದ್ದರಾಗಬೇಕೆಂದು ಕರೆ ನೀಡಿದರು.  

ಅಧಿಕಾರಿಗಳು ಹಾಗೂ ಗ್ರಾಮದ ಸಾರ್ವಜನಿಕರ ಸಮ್ಮುಖದಲ್ಲಿ ಸಂಪನ್ಮೂಲ ನಕಾಶೆ ಮೂಲಕ ಗ್ರಾಮದ ಹೊರಗಿನ ಪ್ರದೇಶದಲ್ಲಿರುವ ಗೋಮಾಳ, ಗಾಯಿರಾಣ ಇತ್ಯಾದಿಗಳನ್ನು ಗುರುತಿಸಿ ಅವುಗಳನ್ನು ಯಾವ ರೀತಿಯಾಗಿ ಬಳಕೆ ಮಾಡಿಕೊಳ್ಳಬೇಕು.  

ಜಲ ಸಂಜೀವಿನಿ ಯೋಜನಾ ಪ್ರಕ್ರಿಯೆಯಲ್ಲಿ ಭೌಗೋಳಿಕ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ವೈಶಿಷ್ಟ್ಯತೆಯ ನಕ್ಷೆಗಳ ಮೂಲಕ ಜಿಲ್ಲಾ ಸಂಪನ್ಮೂಲ ತಂಡದ ಸದಸ್ಯರಾದ ಜಿ.ಪಂ ಎಡಿಪಿಸಿ ಮಹಾಂತಸ್ವಾಮಿ, ವಿಶ್ವನಾಥ ರಾಠೋಡ ಪ್ರಾತ್ಯಕ್ಷಿಕೆಯನ್ನು ತಿಳಿಸಿದರು.  

ಈ ಸಂದರ್ಭದಲ್ಲಿ  ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್, ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಹನಮಂತಗೌಡ ಪೋಲಿಸ್ ಪಾಟೀಲ್, ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಾಘವೇಂದ್ರ, ಗ್ರಾಮ ಪಂಚಾಯತಿ ಸದಸ್ಯರಾದ ಬಾಳೇಶ್, ದುರಗಪ್ಪ, ಹೊಳೆಯಪ್ಪ, ತೋಟಗಾರಿಕೆ, ಅರಣ್ಯ ಇಲಾಖೆಯ ಅಧಿಕಾರಿಗಳು, ತಾಲೂಕ ಎಂಐಎಸ್ ಸಂಯೋಜಕ ಬಸವರಾಜ, ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ   

ಬಸವರಾಜ,  ಎಲ್ಲಾ ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ತಾಂತ್ರಿಕ ಸಹಾಯಕರುಗಳು, ಬೇರ್ ಪೂಟ್ ಟೆಕ್ನಿಷಿಯನ್ ಗಳು, ಗ್ರಾಮ ಕಾಯಕ ಮಿತ್ರರು, ತಾಂಡಾ ರೋಜಗಾರ್ ಮಿತ್ರರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು. 


ಸುದ್ದಿ ಓದಿ