ಉರ್ದು ಮಾಧ್ಯಮ ಸಾನಿಯಾ ಶೇಖಲ್ಲಿ ಜಿಲ್ಲೆಗೆ ಪ್ರಥಮ
ಶಿಗ್ಗಾವಿ 21: ಪಟ್ಟಣದ ಸರಕಾರಿ ಉರ್ದು ಪ್ರೌಡ ಶಾಲೆಯ ಸಾನಿಯಾ ನಿಸಾರಹ್ಮದ ಶೇಖಲ್ಲಿ ಉರ್ದು ಮಾಧ್ಯಮದಲ್ಲಿ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿಶತ 98.72ರಷ್ಟು ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಶಿಗ್ಗಾವಿ ತಾಲೂಕಿಗೆ ಕೀರ್ತಿ ತಂದಿದ್ದಾಳೆ ಅಲ್ಲದೇ ಉರ್ದು ಪ್ರೌಡಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಎಂದು ಮುಖಂಡ ಯಾಸಿರಖಾನ ಪಠಾಣ ಹೇಳಿದರು.
ಮುಖಂಡ ಯಾಸಿರಖಾನ ಪಠಾಣ ನೇತೃತ್ವದಲ್ಲಿ ವಿಧ್ಯಾರ್ಥಿಯನ್ನು ಅವರ ಮನೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವಿಧ್ಯಾರ್ಥಿನಿ ತಂದೆ ನಜೀರಹ್ಮದ ಶೇಖಲ್ಲಿ, ಪುರಸಭೆ ಮಾಜಿ ಅಧ್ಯಕ್ಷ ಅಬ್ದುಲ ಕರೀಂ ಮೊಗಲಲ್ಲಿ, ಅಂಜುಮನ ಸಂಸ್ಥೆ ಅಧ್ಯಕ್ಷ ಸುಲೇಮಾನಖಾನ ಖಾಜೇಖಾನವರ, ಸದಸ್ಯ ಅತ್ತಾವುಲ್ಲಾಖಾನ ಖಾಜೇಖಾನವರ, ಜಾಕೀರ ಅಹ್ಮದ ತೌಕಲ್ಲಿ, ಮಹ್ಮದಸಾಧಿಕ ಸವಣೂರ, ನಿಸಾರಹ್ಮದ ತೌಕಲ್ಲಿ, ಅಲ್ಲಿಬಾಷಾ ಮಲ್ಲೂರ, ನೂರಹ್ಮದ ಶೇಖಲ್ಲಿ ಸೇರಿದಂತೆ ಕುಟುಂಬದ ಸದಸ್ಯರು, ಇತರರು ಉಪಸ್ಥಿತರಿದ್ದರು.