ಹಿಂದೂ-ಮುಸ್ಲಿಂ ಐಕ್ಯತೆಗೆ ಸಾಕ್ಷಿಯಾದ ಸಂಗೊಳ್ಳಿಯ ಮೊಹರಂ
ಸವದತ್ತಿ 28: ಬೈಲಹೊಂಗಲ ತಾಲ್ಲೂಕಿನ ಐತಿಹಾಸಿಕ ರಾಯಣ್ಣನ ಸಂಗೊಳ್ಳಿ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದೂ ಹಾಗೂ ಮುಸ್ಲಿಂ ಬಾಂಧವರು ಸೌಹಾರ್ದಯುತವಾಗಿ ಆಚರಿಸಿದರು. ಲಾಲ್ಶಾವಲಿ ದೇವರ ಪಂಜಾಕ್ಕೆ ವಿಶೇಷ ಪೂಜೆ, ಕಿಚ್ಚು ಹಾಯುವುದು, ಡೋಲು ಮೆರವಣಿಗೆ ಹಾಗೂ ಸವಾರಿ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆದವು. ಗ್ರಾಮದ ಉತ್ತಮ ಹಾಗೂ ಸಕಲರ ಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಭೇದ ಮರೆತು ಗ್ರಾಮಸ್ಥರು ಒಗ್ಗಟ್ಟಿನಿಂದ ಭಾಗವಹಿಸಿ ಧಾರ್ಮಿಕ ಸಾಮರಸ್ಯದ ಮಾದರಿಯನ್ನು ಮೂಡಿಸಿದರು.