ವಿಜಯಪುರ

ತಾಲೂಕ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸಂಗಮೇಶ ಉತ್ನಾಳ ಪುನರಾಯ್ಕೆ

ತಾಲೂಕ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸಂಗಮೇಶ ಉತ್ನಾಳ ಪುನರಾಯ್ಕೆ

 ದೇವರ ಹಿಪ್ಪರಗಿ 10: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸಂಗಮೇಶ ಉತ್ನಾಳ ಅವರು 2 ನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಯಾದರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ 2025/28 ನೇ ಸಾಲಿನ ಕಾನಿಪ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂಗಮೇಶ ಉತ್ನಾಳ  ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ಕುಂಬಾರ, ಉಪಾಧ್ಯಕ್ಷರಾಗಿ ಶ್ರೀಧರ ನಾಡಗೌಡ, ಮಂಜುನಾಥ ಬ್ಯಾಕೋಡ, ಖಜಾಂಚಿಯಾಗಿ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಕಾರ್ಯದರ್ಶಿಗಳಾಗಿ ಹುಸೇನ ಕೊಕಟನೂರ, ಮಳೆಪ್ಪಗೌಡ ಬಿರಾದಾರ ಸೇರಿದಂತೆ ಎಲ್ಲ 7 ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆಯಾದರು.  ಚುನಾವಣಾ ಉಸ್ತುವಾರಿಗಳಾದ ಮಹೇಶ ಶೆಟಗಾರ, ಮೋಹನ ಕುಲಕರ್ಣಿ, ಸೀತಾರಾಮ ಕುಲಕರ್ಣಿ, ಸಮೀರ ಇನಾಮದಾರ, ಚುನಾವಣೆ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟರು. 

 ಹಿರಿಯ ಪತ್ರಕರ್ತ ಮಹಮದ ರಫೀಕ ಮೋಮಿನ ಭೀಮಣ್ಣ ದಿಡ್ಡಿಮನಿ ಈರನಗೌಡ ಪಾಟೀಲ ಪ್ರವೀಣ ಕುಲಕರ್ಣಿ,  ಸಂತೋಷ ಬಿಜ್ಜರಗಿ, ಮಲ್ಲಿಕಾರ್ಜುನ ಕಬ್ಬಿನ, ಹಸನ ನದಾಫ್, ರಫೀಕ್  ಪತ್ತೆ ಅಹ್ಮದ್, ಅಣ್ಣಸಾಹೇಬ ಹೂಗಾರ, ಸೋಮನಾಥ ನಡಗೇರಿ, ನಬಿರಸೂಲ ಗುಡ್ನಾಳ, ಶಂಕರಲಿಂಗ ಧೂಳಖೇಡ, ಮಯೂರ ಕುಮಾರ ತಿಳಗೂಳಕರ, ದುಂಡಪ್ಪಗೌಡ ಸಿಂದಗಿ, ಮಹಿಬೂಬ ಕೊಕಟನೂರ, ಸಿದ್ದು ಕಾಟಕರ, ಅಹಮದಅಲಿ ಮುಲ್ಲಾ, ಬಿ ಎಂ ವಂದಾಲ, ಎಸ್ ಎಸ್ ಜಮಾದಾರ ಸೇರಿದಂತೆ ಕಾ. ನಿ. ಪ. ತಾಲೂಕ  ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಶುಭ ಹಾರೈಸಿ ಅಭಿನಂದಿಸಿದರು. 


ಸುದ್ದಿ ಓದಿ