ಜಗದೊಡೆಯ ಶಿವಗೆ ನಮನ
ಶಿವನ ಉಪಾಸನೆಯನ್ನು ನಾವು ಮೊಟ್ಟ ಮೊದಲು ಸಿಂಧು ಸಂಸ್ಕೃತಿಯಲ್ಲಿ ಗುರುತಿಸಬಹುದು. ಜೀವಕೋಟಿಗಳಿಗೆ ಒಡೆಯನಾದ ಶಿವನೇ ಪಶುಪತಿ ಎಂಬ ಕಲ್ಪನೆ ಆಗಲೇ ಇತ್ತೆಂಬುದಕ್ಕೆ ಅಲ್ಲಿ "ಭಿನ್ನ ರೀತಿಯಲ್ಲಿ ದೊರೆತ ಶಿವನ ಚಿತ್ರಗಳೇ ಸಾಕ್ಷಿ. ತ್ರಿಶೂಲದ ಆಕಾರವನ್ನುಳ್ಳ ಶಿರೋಭೂಷಣವನ್ನು ಧರಿಸಿದ ಶಿವ ಎತ್ತರವಾದ ಪೀಠದ ಮೇಲೆ ಯೋಗಮುದ್ರೆಯಲ್ಲಿ ಕುಳಿತು, ಹಲವಾರು ಕ್ರೂರ ಪ್ರಾಣಿಗಳಿಂದ ಸುತ್ತುವರಿಯಲ್ಪಟ್ಟಿದ್ದಾನೆ. ಶಿವನನ್ನು ಈ ರೂಪದಲ್ಲಿ ಅಲ್ಲದೇ ಲಿಂಗದ ರೂಪದಲ್ಲಿಯೂ ಪೂಜಿಸುವುದು ಇಲ್ಲಿ ಪ್ರಮುಖವಾಗಿತ್ತು.
ಶಿವನ ಜೊತೆಯಲ್ಲಿ, ಹಲವಾರು ಹೆಸರುಗಳಿಂದ ಪ್ರಚಲಿತದಲ್ಲಿರುವ ಶಕ್ತಿಯ ಆರಾಧನೆ, ಪ್ರಕೃತಿಯ ಉಪಾಸನೆಯನ್ನು ಕಾಣಬಹುದು. ಶಿವನ ಆರಾಧನೆ ಭಾರತದಾದ್ಯಂತ ಪ್ರಚಲಿತದಲ್ಲಿದ್ದುದು ಮಾತ್ರವಲ್ಲ ನೇಪಾಳ, ಕಂಬೋಡಿಯಾ, ಚೀನಾ, ಜಾವಾ, ಜಪಾನ್, ಇಂಡೋನೇಶಿಯಾ ಮೊದಲಾದ ದೇಶಗಳಲ್ಲಿ ಲಿಂಗಪೂಜೆಯು ಕ್ರಿ.ಶ 550ಕ್ಕಿಂತಲೂ ಪೂರ್ವದಲ್ಲಿ ಅಸ್ತಿತ್ವದಲ್ಲಿತ್ತೆಂದು ತಿಳಿದು ಬಂದಿದೆ. ಅಮೇರಿಕೆಯ ಪೂರ್ವನಿವಾಸಿಗಳು ಲಿಂಗಪೂಜಕರಾಗಿದ್ದರಂತೆ.
ಶಿವಸ್ವರೂಪವನ್ನು, ಶಿವನಲ್ಲಿರುವ ದೈವತ್ವವನ್ನು ಶ್ವೇತಾಶ್ವತರ ಉಪನಿಷತ್ತಿನಲ್ಲಿ ಕಾಣಬಹುದು. ಅದರಲ್ಲಿ ಅವನು ಸ್ಟೃಕರ್ತನು, ರಕ್ಷಕನು, ವ್ಯಾಪಕನು ಎಂಬುದು ಅಣೋರಣೀಯಾನ್ ಮಹತೋಮ"ಯಾನ್' ಎಂಬ ವಾಕ್ಯದಲ್ಲಿ ವ್ಯಕ್ತವಾಗಿದೆ. ಶಿವಪುರಾಣ ಸ್ಕಂದಪುರಾಣಾದಿಗಳಲ್ಲಿ ಶಿವನ ಮಹತ್ವ ವರ್ಣಿತವಾಗಿರುವುದರ ಜೊತೆಗೆ ಉಪಾಸನೆಯ ಮಾರ್ಗವು ಉಲ್ಲೇಖೀತವಾಗಿದೆ. ಶಿವಮಹಾಪುರಾಣದಲ್ಲಿ 7 ಖಂಡಗಳಿದ್ದು ಕೊನೆಯದು 'ವಾಯ"ಯ ಸಂ"ತೆ' ಎಂದು ಪ್ರಸಿದ್ಧವಾಗಿದೆ.
ಈ ಪುರಾಣ ಶಂಕರಾಚಾರ‌್ಯಗಿಂತ "ಂದಿನದು. ರಾಮಾಯಣ-ಮಹಾಭಾರತ ವೇಳೆಗಾಗಲೇ ಶಿವನು ಆರ್ಯರ ಪ್ರಮುಖ ದೇವತೆಯಾಗಿದ್ದನೆಂಬುದಕ್ಕೆ ಬಹಳಷ್ಟು ಆಧಾರಗಳಿವೆ. ರಾಮೇಶ್ವರದಲ್ಲಿ ರಾಮ ಸ್ವತಃ ಶಿವಲಿಂಗನನ್ನು ಪೂಜಿಸಿದ್ದನ್ನು, ಮಹಾಭಾರತದ ದ್ರೋಣಪರ್ವದಲ್ಲಿ (ಸರ್ಗ80-81) ಕೃಷ್ಣ ಅರ್ಜುನರು ಶಿವನನ್ನು ಸ್ತುತಿಸಿದ ಸನ್ನಿವೇಶಗಳನ್ನು ಸ್ಮರಿಸಬಹುದು. ಕ್ರಿ.ಪೂ 2ನೇ ಶತಮಾನದ ಮೆಗಸ್ತನೀಸನು ಶಿವಭಾಗವತರನ್ನು ಹೆಸರಿಸಿರುವುದು ಉಲ್ಲೇಖಗೊಂಡಿದೆ. ಶಿವಭಾಗವತರು ತ್ರಿಶೂಲವನ್ನು "ಡಿದು ಸಂಚರಿಸುತ್ತಿದ್ದರೆಂದು ಅವರ ಹೇಳಿಕೆುಂದ ತಿಳಿದಿದೆ.
ತ"ುಳುನಾಡಿನ ಚೋಳರು, ಪಾಂಡ್ಯರು, ಪಲ್ಲವರು ಮೊದಲಾದ ಅರಸು ಮನೆತನಗಳು, ಕರ್ನಾಟಕದ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, "ಜಯನಗರದ ಅರಸರು ಶಿವನ ಹಲವಾರು ದೇವಾಲಯಗಳನ್ನು ರಚಿಸಿ ಬೆಳೆಸಿದರು. ಶಿವನನ್ನು ಹರ, ಮಹಾದೇವ, ಮುಕ್ಕಣ್ಣ, ಶಂಭು, ಶಂಕರ, ಪಶುಪತಿ ಎಂಬ ಹಲವಾರು ನಾಮಗಳಿಂದ ಕರೆಯುತ್ತಾ ಹಲವಾರು ಭಕ್ತಿಗೀತೆಗಳನ್ನು ರಚಿಸಿ ಹಾಡುತ್ತಾ, ಭಾರತದ ಎಲ್ಲೆಡೆ ದೇಗುಲಗಳನ್ನು ಕಟ್ಟಿ ಶಿವರಾಧನೆ ಮಾಡತೊಡಗಿದರು.
ಆ ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳಾಗಿ ಹೊರಹೊ"್ಮುವೆ. ಚೋಳರು ಶಿವನ ಆರಾಧಕರು. ಒಂದನೇ ರಾಜರಾಜಚೋಳನು ಜಗತ್ಪ್ರಸಿದ್ಧ ತಂಜಾವೂರಿನ ಬೃಹದೀಶ್ವರ ದೇವಾಲಯ ನಿ"ುರ್ಸಿ, ದ್ರಾ"ಡ ವಾಸ್ತುಶಿಲ್ಪಕಲೆಯಲ್ಲಿ ಹೊಸ ಅಧ್ಯಾಯ ಆರಂಭಿಸಿದರು. ಎರಡನೇ ರಾಜರಾಜ ಚೋಳನು ದಾರಾಸುರಂನಲ್ಲಿ ಭವ್ಯವಾದ ಐರಾವತೇಶ್ವರ ದೇಗುಲವನ್ನು ನಿ"ುರ್ಸಿದನು. ರಾಜಾಧಿರಾಜನು ತ್ರಿಭುವನಂನಲ್ಲಿ ಕಂಪರೇಶ್ವರ (ತ್ರಿಭುವನೇಶ್ವರ) ದೇಗುಲವನ್ನು ನಿ"ುರ್ಸಿದನು.
ತ"ುಳುನಾಡಿನಲ್ಲಿ ಸಂತರಾದ ನಾಯನಂರರು 'ಶಿವನೊಲುಮೆಗೆ ಭಕ್ತಿಯೇ ಸಾಧನ', ಅವರವರ ಇಚ್ಛೆಯಂತೆ ದೇವರಲ್ಲಿ ನಂಬಿಕೆುಟ್ಟು ಆರಾಧಿಸಿದರೆ ಮೋಕ್ಷವನ್ನು ಪಡೆಯಬಹುದೆಂದು ಸಾರುತ್ತಾ ಅಸಂಖ್ಯಾತ ಭಕ್ತಿಗೀತೆಗಳನ್ನು, ಕೀರ್ತನೆಗಳನ್ನು ರಚಿಸಿದರು.
ಶಿವನ ಕುಟುಂಬ, ಅದು ಆದರ್ಶ ಸಂಸಾರಕ್ಕೂ ನಿದರ್ಶನವಾಗಿದೆ. ಅನ್ಯೋನ್ಯ ದಾಂಪತ್ಯ ಎಂದರೆ ಅದು ಶಿವ-ಪಾರ್ವತಿಯರ ದಾಂಪತ್ಯವೇ ಹೌದು.