ಮನರಂಜನೆ

ಟೈಗರ್ 3 ಚಿತ್ರೀಕರಣದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಭಾಗಿ; ಫೋಟೋ, ವಿಡಿಯೋಗಳು ವೈರಲ್

ಟೈಗರ್ 3 ಚಿತ್ರೀಕರಣದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಭಾಗಿ; ಫೋಟೋ, ವಿಡಿಯೋಗಳು ವೈರಲ್

ಮುಂಬೈ: ಫೆಬ್ರವರಿ 17  ಬಾಲಿವುಡ್ ಸೂಪರ್‌ ಸ್ಟಾರ್‌ ಗಳಾದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಪ್ರಸ್ತುತ ರಾಜಧಾನಿ ನವದೆಹಲಿಯಲ್ಲಿ ತಮ್ಮ ಮುಂಬರುವ ಆಕ್ಷನ್ ಚಿತ್ರ ಟೈಗರ್ 3 ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಈ ಇಬ್ಬರು ಸ್ಟಾರ್ ಗಳು ಶೂಟಿಂಗ್ ನಲ್ಲಿ ಪಾಲ್ಗೊಂಡಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟೈಗರ್ 3 ಸಿನಿಮಾವನ್ನು ಮನೀಶ್ ಶರ್ಮಾ ನಿರ್ದೇಶಿಸುತ್ತಿದ್ದು, ಇದು ಸೂಪರ್‌ಹಿಟ್ YRF ಫ್ರಾಂಚೈಸ್ ನ ಮೂರನೇ ಭಾಗವಾಗಿದೆ. ಚಿತ್ರದ ಪ್ರಮುಖ ಭಾಗಗಳನ್ನು 2021 ರಲ್ಲಿ ರಷ್ಯಾ, ಟರ್ಕಿ ಮತ್ತು ಆಸ್ಟ್ರಿಯಾದಲ್ಲಿ ಚಿತ್ರೀಕರಿಸಲಾಗಿದೆ.

ಕತ್ರಿನಾ ಫೋನ್ ಭೂತ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಅವರೊಂದಿಗೆ ಜೀ ಲೆ ಜರಾ ಮತ್ತು ಶ್ರೀರಾಮ್ ರಾಘವನ್ ಅವರ ಮೆರ್ರಿ ಕ್ರಿಸ್ ಮಸ್ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಸುದ್ದಿ ಓದಿ