ಬಳ್ಳಾರಿ

ಬಿ.ಇಡಿ ಸೀಟುಗಳ ಮಾರಾಟ: ತನಿಖೆಗೆ ಆಗ್ರಹಿಸಿ ಅಭಾವಿಪ ಪ್ರತಿಭಟನೆ

ಬಿ.ಇಡಿ ಸೀಟುಗಳ ಮಾರಾಟ: ತನಿಖೆಗೆ ಆಗ್ರಹಿಸಿ ಅಭಾವಿಪ ಪ್ರತಿಭಟನೆ


ಬಳ್ಳಾರಿ 13: ಬಿ.ಇಡಿ ಸೀಟುಗಳನ್ನು ಮಾರಾಟ ಮಾಡುತ್ತಿರುವ ಕಾಲೇಜುಗಳ ವಿರುದ್ಧ ತನಿಖೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಶನಿವಾರರಂದು ಪ್ರತಿಭಟನೆ ಮಾಡಿದರು.           

    ರಾಜ್ಯದಲ್ಲಿಂದು ಬಿ.ಇಡಿ ಸೀಟುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಂಧೆ  ನಡೆದಿರುವುದು ಬೇಸರದ ಸಂಗತಿ. ಬಿಇಡಿ ಕೋರ್ಸ್‍ಗೆ ಡಿಮಾಂಡ್ ಇರುವುದನ್ನು ಅರಿತ ಕೆಲವು ಬಿ.ಇಡಿ ಶಿಕ್ಷಣ ಸಂಸ್ಥೆಗಳು ಒಂದು ರೀತಿಯಲ್ಲಿ ಬಿಇಡಿ ಪ್ರಮಾಣ ಪತ್ರವನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿವೆ. ಸರಕಾರಿ ಕೋಟಾದಡಿಯಲ್ಲಿ ಸೀಟು ಪಡೆದು ಬಂದ ವಿದ್ಯಾರ್ಥಿಗಳಿಂದ ಖಾಸಗಿ ಬಿ.ಇಡಿ ಕಾಲೇಜುಗಳು  ಬೇಕಾಬಿಟ್ಟಿ ದುಡ್ದು ವಸೂಲಿ ಮಾಡುತ್ತಿರುವುದು ಖಂಡನಾರ್ಹ.

    ಇಂತಹ ಅಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಬಂದ ಮೇಲೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ದುರದೃμÀ್ಟಕರ. ಸರಕಾರ ತಕ್ಷಣವೇ ಬಿ.ಇಡಿ ಕಾಲೇಜುಗಳಲ್ಲಿನ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಂಡವರ ವಿರುದ್ದ ತನಿಖೆ ನಡೆಸಬೇಕೆಂದು ಅಭಾವಿಪ ಪದಾಧಿಕಾರಿಗಳು ಆಗ್ರಹ ಮಾಡಿದ್ದಾರೆ. 

    ಈ ಸಂದರ್ಭದಲ್ಲಿ ನಗರ ಸಂಘಟನಾ ಕಾರ್ಯದರ್ಶಿ ಸಿ.ಕೌಶಿಕ್, ಪ್ರಾಂತ ಕಾರ್ಯಕಾರಣಿ ಸಮಿತಿ ಸದಸ್ಯರು ಹರ್ಷನಾಯ್ಕ್, ಜಿಲ್ಲಾ ಸಂಚಾಲಕ ನವೀನ, ಕಾರ್ಯಕರ್ತರಾದ ಈರಣ್ಣ, ಶ್ರೀನಿವಾಸ್, ಪ್ರಸಾದ್, ಕಾರ್ಯಕರ್ತರಾದ ಹುಲೇಶ್, ದಯಾನಂದ, ಶರಣಬಸವ, ಭೀಮ, ಶ್ರೀಧರ್, ರಾಜಶೇಖರ್, ಗೋವಿಂದರಾಜು, ಆದೇಶ್ ಹಾಗೂ ಮುಂತಾದವರು ಭಾಗವಹಿಸಿದ್ದರು.

ಸುದ್ದಿ ಓದಿ