ತಾಳಿಕೋಟಿ

ಸಂತ ಕನಕದಾಸರ ಹಾಗೂ ಒನಕೆ ಓಬವ್ವರ ಜಯಂತಿ

ಸಂತ ಕನಕದಾಸರ ಹಾಗೂ ಒನಕೆ ಓಬವ್ವರ ಜಯಂತಿ

ತಾಳಿಕೋಟೆ: ಜಾತಿ ಸಂಕೋಲೆಯನ್ನು ಕಳಚಿದ ಭಕ್ತ ಶ್ರೇಷ್ಠ ಕನಕದಾಸರ ತತ್ವ ಅವರ ಕೀರ್ತನೆಯ ಸಂದೇಶಗಳನ್ನು ಪಾಲಿಸುವುದು ನಾವು ಅವರಿಗೆ ಕೊಡುವ ಅತಿ ದೊಡ್ಡ ಗೌರವವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒನಕೆ ಓಬವ್ವ ಪಡೆಯು ಸತತವಾಗಿ ಮಹಿಳೆಯರಿಗೆ ವಿಶೇಷ ಯುದ್ಧ ನೀತಿಗಳನ್ನು ಕಲಿಸುತ್ತದೆ ಎಂದು ಶ್ರೀಧರ ಗುಟೂರ ತಾಲೂಕ ದಂಡಾಧಿಕಾರಿಗಳು ತಿಳಿಸಿದರು. ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕ ಆಡಳಿತ ಹಮ್ಮಿಕೊಂಡಿದ್ದ ಸಂತ ಕನಕದಾಸರ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಉಪನ್ಯಾಸಕಿಯಾಗಿ ಆಗಮಿಸಿದ ಎಸ ಕೆ ಪದವಿ ಕಾಲೇಜಿನ ಪ್ರಾಧ್ಯಾಪಕಿಯಾದ  ಡಾ. ಸುಜಾತಾ ಚಲವಾದಿ ಮಾತನಾಡಿ ಚಿತ್ರದುರ್ಗ ಕೋಟೆಗೆ ಹೈದರಾಲಿಯ ಸೈನ್ಯ ನುಸುಳುತ್ತಿರುವಾಗ ಒನಕೆ ಓಬವ್ವ ನೂರಾರು ಸೈನಿಕರನ್ನು ಸದೆ ಪಡೆದು ಕೋಟಿ ರಕ್ಷಣೆ ಮಾಡಿದ್ದಾಳೆ. ಕನಕದಾಸರ ಕೀರ್ತನೆಯಲ್ಲಿ ಅಗಾಧ ವೈಚಾರಿಕ ಚಿಂತನೆಯಲ್ಲಿ ಅವರು ಬರಿ ಹರಿಯನ್ನು ಹೊಗಳಿ ದಾಸ ದಾಸ ಶ್ರೇಷ್ಠರಾಗಿಲ್ಲ ಅಂದಿನ ಕಾಲದಲ್ಲಿ ನಡೆಯುತ್ತಿರುವ ಡಾಂಬಿಕ ಮೌಡ್ಯದ ಅಂದಾಚರಣೆಯನ್ನು ತೀಕ್ಷ್ಣವಾಗಿ ಟೀಕಿಸಿದ್ದರು ಎಂದು ತಿಳಿಸಿದರು. ಈ ಸಮಯದಲ್ಲಿ ಬಿ ಆರ ಬಿರಾದಾರ ತಾ ಪಂ ಇಓ ಅಧಿಕಾರಿಗಳು, ಎಸ ಬಿ ಕಟ್ಟಿಮನಿ ನಿವೃತ್ತ ಪೊಲೀಸ ವರಿಷ್ಠಾಧಿಕಾರಿಗಳು, ಸಾಯಬಣ್ಣ ಆಲ್ಯಾಳ ಮಾಜಿ ಜಿ ಪಂ ಸದಸ್ಯರು, ಮುತ್ತಪ್ಪ ಚಮಲಾಪುರ ಪುರಸಭೆ ಸದಸ್ಯರು, ಜೆಭೀಮ ಮುತ್ತಗಿ ಕರವೇ ಜಿಲ್ಲಾ ಕಾರ್ಯದರ್ಶಿಗಳು,ಡಾ.ಐ ಬಿ ತಳ್ಳಳ್ಳಿ ನೌಕರರ ಕುರುಬ ಸಂಘ ಅಧ್ಯಕ್ಷರು,ಶಿವರಾಜ ಗುಂಡಕನಾಳ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಅಧ್ಯಕ್ಷರು, ಸುರೇಶ ನಾಯಕ ಪುರಸಭೆ ಮುಖ್ಯಾಧಿಕಾರಿಗಳು, ಸಿ ಆರ ಪಿ ರಾಜು ವಿಜಾಪುರ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. 


ಸುದ್ದಿ ಓದಿ