ಶಿಗ್ಗಾವ್

ತಂದೆ-ತಾಯಿ ಇಲ್ಲದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ಸಾಧನೆ

ತಂದೆ-ತಾಯಿ ಇಲ್ಲದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ಸಾಧನೆ

ಲೋಕದರ್ಶನ ವರದಿ ಮಧ್ಯ

ಶಿಗ್ಗಾವಿ 20: ಬಾಡದ ಅಟಲ್ ಬಿಹಾರಿ ವಾಜಪೇಯಿ ಶಾಲೆಯ ವಿದ್ಯಾಥರ್ಿನಿ ಕು. ಅಪರ್ಿತಾ ಮರಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿಶತ 94 ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡು ಸೋದರಮಾವನ ಮನೆಯಲ್ಲಿ ಬೆಳೆದ ಈ ಹುಡುಗಿ ಪರೀಕ್ಷೆಗೆ ಎರಡು ತಿಂಗಳು ಇರುವಾಗ ಕಳೆದ ಜನೇವರಿ ತಿಂಗಳಿನಲ್ಲಿ ತಂದೆಯನ್ನು ಕಳೆದುಕೊಂಡಿತ್ತು ಇದೆಲ್ಲದರ ಮಧ್ಯ

ಛಲ ಬಿಡದೆ ಓದಿ ಈಗ ಎಸ್ಎಸ್ಎಲ್.ಸಿ ಯಲ್ಲಿ 94 ಅಂಕ ಗಳಿಸಿದ್ದಾಳೆ

ಹುಟ್ಟಿ 13 ದಿವಸದವಳಿದ್ದಾಗಲೇ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ಈ ಮಗು ಸೋದರಮಾವನ ಹೆಂಡತಿಯನ್ನೇ ತನ್ನ ತಾಯಿ ಎಂದುಕೊಂಡು ಬೆಳೆದ ಈ ಮಗು ತನ್ನ ಅಜ್ಜಿಯಿಂದ ತಾಯಿಯ ತಾಯಿಯಿಂದ ತನ್ನ ತಾಯಿಯ ಆಸೆಯನ್ನು ತಿಳಿದುಕೊಂಡು ತನ್ನ ತಾಯಿಯ ಆಸೆಯಂತೆ ತಾನು ವಿದ್ಯಾವಂತೆಯಾಗಿ ಸಮಾಜದಲ್ಲಿ ಗುರುತಿಸಲ್ಪಡಬೇಕು ಎಂದು ದೃಢ ಸಂಕಲ್ಪದಿಂದ ಎಲ್ಲ ನೋವನ್ನು ನುಂಗಿಕೊಂಡು ಬೆಳೆದಳು ಇನ್ನೇನು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಇನ್ನೆರಡು ತಿಂಗಳು ಬಾಕಿ ಇರುವಾಗಲೇ ತಂದೆಯ ಸಾವು ಬರಸಿಡಿಲಿನಂತೆ ಅಪ್ಪಳಿಸಿದಾಗ ದೃತಿಗೆಡದ ಅಪರ್ಿತಾ ತಂದೆ ತಾಯಿಯ ಕನಸ್ಸನ್ನು ಉಳಿಸುವ ಸಂಕಲ್ಪ ಮಾಡಿ ದೈರ್ಯದಿಂದ ಪರೀಕ್ಷೆ ಎದುರಿಸಿ ಸಾಧನೆ ಮಾಡಿದ್ದಾಳೆ. 

  ವೈದ್ಯಕೀಯ ಸೌಲಭ್ಯದ ಕೊರತೆಯಿಂದ ತನ್ನ ತಂದೆ-ತಾಯಿ ಸಾವನ್ನಪ್ಪಿದ್ದಾರೆ ಎಂದುಕೊಂಡಿರುವ ಅಪರ್ಿತಾ ಮುಂದೆ ಓದಿ ಒಳ್ಳೆಯ ವೈದ್ಯಯಾಗಿ ಸಮಾಜ ಸೇವೆ ಮಾಡಬೇಕೆನ್ನುವ ಇಂಗಿತ ಹೊಂದಿದ್ದಾಳೆ ಸರಕಾರ ಇಂಥ ಅನಾಥ ಮಕ್ಕಳಿಗೆ ಆಸರೆಯಾಗಬೇಕೆಂಬುದು ಜನರ ಆಸೆ 

ಸುದ್ದಿ ಓದಿ