ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭ
ಲೋಕದರ್ಶನ ವರದಿ
ಶಿಗ್ಗಾವಿ 22: ಕೇವಲ ನಿಮ್ಮ ಅಂಕಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ, ನಿಮ್ಮಲ್ಲಿ ಅಡಗಿರುವ ಪ್ರತಿಭೆ ನಿಮ್ಮ ಭವಿಷ್ಯವನ್ನು ನಿರ್ದರಿಸುತ್ತದೆ ಎಂದು ಪಿನಿಕ್ಸ ಸಿಬಿಎಸ್ಸಿ ಕಾನ್ವೆಂಟ್ ಶಾಲೆಯ ಮುಖ್ಯಸ್ತ ಡಾ. ಎಂ.ಎಂ.ತಿರ್ಲಾಪೂರ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಪಿನಿಕ್ಸ ಕಾನ್ವೆಂಟ್ ಸಿಬಿಎಸ್ಸಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ಶಿಕ್ಷಕರನ್ನು ಉದ್ದೇಶಿಸಿ ಮಕ್ಕಳಿಗೆ ಕೇವಲ ಅಂಕ ಗಳಿಸುವುದನ್ನು ಹೇಳಿಕೊಳ್ಳುವುದಲ್ಲದೇ ಅದರೊಟ್ಟಿಗೆ ಜೀವನದಲ್ಲಿ ಮಕ್ಕಳಿಗೆ ಹೇಗೆ ಬದುಕಬೇಕೆಂಬ ಕೌಶಲ್ಯವನ್ನು ಕಲಿಸಿಕೊಡುವಂತೆ ಸೂಚಿಸಿದರು.
ಸಂಸ್ಥೆಯ ಉಪಾಧ್ಯಕ್ಷ ನರಹರಿ ಕಟ್ಟಿ ಮಾತನಾಡಿ ಮೊಬೈಲ್ ಬೀಡಿ ಪುಸ್ತಕ ಹಿಡಿ, ಮೊಬೈಲನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಅವಶ್ಯಕತೆಗೆ ತಕ್ಕಂತೆ ಅದರ ಅನಿಯಮಿತ ಉಪಯೋಗದ ಬಗ್ಗೆ ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪಿನಿಕ್ಸ ಸಂಸ್ಥೆಯ ಕಾರ್ಯದರ್ಶಿ ಡಾ. ರಾಣಿ ತಿರ್ಲಾಪೂರ ಮಾತನಾಡಿ ನಾವು ಇಂದಿನ ದಿನಮಾನಗಳಲ್ಲಿ ನಮ್ಮ ಭಾರತ ದೇಶದ ಭವ್ಯ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಅಂದರೆ ತಂದೆ ತಾಯಿ ಹಾಗೂ ಗುರು ಹಿರಿಯರನ್ನು ಗೌರವದಿಂದ ಕಾಣುವಂತ ವಾತಾವರಣ ನಮ್ಮ ಮನೆಯಲ್ಲಿ ಮತ್ತು ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಫಾರೂಖ ಮೂಲಿಮನಿ, ಉಪ ಪ್ರಾಂಶುಪಾಲೆ ಅಪ್ರೋಜಾ ಆಡೂರ ಸೇರಿದಂತೆ ಎಲ್ಲ ಶಿಕ್ಷಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.