ಉದ್ಯೋಗಶೀಲರಾದವರಿಗೆ ಲಕ್ಷ್ಮೀ ತನ್ನಿಂತಾನೇ ಒಲಿಯುತ್ತಾಳೆ: ಡಾ.ತೋಂಟದಾರ್ಯ ಸಿದ್ದರಾಮ ಶ್ರೀ
ಮುಂಡರಗಿ 13: ಹಿರಿಯರ ಮಾರ್ಗದರ್ಶನದಂತೆ ಇಂದಿನ ಯುವಕರು ಹಾಗೂ ರೈತರು ನಡೆದುಕೊಂಡರೆ ಈ ದೇಶವನ್ನು ಪ್ರಭಾವಶಾಲಿ ದೇಶವನ್ನಾಗಿ ಮಾಡಬಹುದು. ಹಾಗೂ ಉದ್ಯೋಗಶೀಲರಾದವರಿಗೆ ಲಕ್ಷ್ಮೀ ತನ್ನಿಂತಾನೇ ಒಲಿಯುತ್ತಾಳೆ ಎಂದು ಡಂಬಳ-ಗದಗ ಸಂಸ್ಥಾನಮಠದ ಜಗದ್ಗುರು ಡಾ.ತೋಂಟದಾರ್ಯ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬರದೂರ ಗ್ರಾಮದ ಹತ್ತಿರ ಮಾಜಿ ಸಚಿವ ಎಸ್.ಎಸ್.ಪಾಟೀಲ್ ಇವರ 88ನೇ ಹುಟ್ಟುಹಬ್ಬದ ಪ್ರಯುಕ್ತ ಏರಿ್ಡಸಿದ ಮನವಹೋತ್ಸವ ಹಾಗೂ ಮೇ.ವಿಲ್ಯಾಂಪ್ಸ್ ಇಂಡಸ್ಟ್ರೀಸ್ನ ಎಚ್ಡಿಪಿಇ ಪೈಪ್ ಘಟಕದ ಪ್ರಾರಂಭೋತ್ಸವ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಅವರು ಆಶಿರ್ವಚನ ನೀಡಿದರು.
ಪ್ರಸ್ತುತ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಪೂರಕವಾಗಿ ಈ ಫ್ರಾಕ್ಟರಿಯನ್ನು ಪ್ರಾರಂಭಿಸಲಾಗಿದೆ. ಈ ಎಲ್ಲಾ ವ್ಯವಸ್ಥೆಗೆ ಪಾಟೀಲ್ ಕುಟುಂಬದ ಕೇಂದ್ರ ಬಿಂದುವಾದ ಅವರ ತಾಯಿಯು ಮಕ್ಕಳಿಗೆ ನೀಡಿದ ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿಯ ಪ್ರತಿಫಲವೇ ಕಾರಣ. ಹೀಗಾಗಿ ಅವರ ತಾಯಿಗೆ ತಕ್ಕ ಮಕ್ಕಳಾಗಿ ಈ ಭಾಗದ ರೈತರಿಗೆ ಉಪಯೋಗವಾಗುವ ಕೃಷಿ ಚಟುವಟಿಕೆಗೆ ಉತ್ಪಾದಿಸುವಂತ ವಸ್ತುಗಳನ್ನು ತಯಾರಿಸುವಂತಹ ಘಟಕವನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಸಾನಿದ್ಯವಹಿಸಿದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮಾತನಾಡಿ, ಪಾಟೀಲ್ ಮನೆತನ ಗುರುನಿಷ್ಠೆಯನ್ನು ಹೊಂದಿರುವಂತ ಮನೆತನವಾಗಿದೆ. ಮನುಷ್ಯನಿಗೆ ಶ್ರೀಮಂತಿಕೆ ಬಂದ ಮೇಲೆ ಭಾವನೆಯನ್ನು ಕಳೆದುಕೊಳ್ಳುವ ಹಲವಾರು ವ್ಯಕ್ತಿಗಳನ್ನು ನಾವು ಕಾಣುತ್ತೇವೆ. ಆದರೆ ಈ ಪಾಟೀಲ ಬಂದುಗಳು ಹಿರಿಯರ ಮಾರ್ಗದರ್ಶನದಲ್ಲಿಯೇ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಹೀಗಾಗಿ ಅವರು ಹಲವಾರು ಸಮಾಜಮುಖಿ ಕೆಲಸ ಮಾಡುತ್ತಾ ಉತ್ತಮ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದಾರೆ.
ಅಲ್ಲದೇ ಇವರು ಪ್ರಾರಂಭಿಸಲಾದ ಈ ಘಟಕದಿಂದ ನೂರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನು ಶೃಷ್ಟಿಮಾಡಿ ಕೊಟ್ಟಂತಾಗುತ್ತದೆ. ಗ್ರಾಮೀಣ ಭಾಗದಲ್ಲಿಯೇ ಈ ಘಟಕವನ್ನು ಪ್ರಾರಂಭಿಸಿರುವುದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಅವಕಾಶ ನೀಡುವ ಆಶಾಭಾವನೆಯನ್ನು ಹೊಂದಿರುತ್ತಾರೆ. ಅಲ್ಲದೇ ಈ ಪಾಟೀಲ್ ಬಂದುಗಳು ತಾವು ಕಷ್ಟಪಟ್ಟು ದುಡಿದ 50ಅ ರಷ್ಠು ಹಣವನ್ನು ಧರ್ಮಕ್ಕಾಗಿ ಧಾನ ಧರ್ಮ ಮಾಡಿ ಬದುಕುವ ಮನೆತನವಾಗಿದೆ. ಹೀಗಾಗಿ ಇವರ ಕುಟುಂಬದ ಎಲ್ಲಾ ಸದಸ್ಯರು ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಹೊಂದಿರುತ್ತಾರೆ. ಹೀಗಾಗಿ ಈ ಫ್ಯಾಕ್ಟರಿ ಉತ್ತರ ಕರ್ನಾಟಕದ ಉನ್ನತವಾದ ಫ್ಯಾಕ್ಟರಿಯಾಗಿ ಹೆಸರು ಮಾಡಲಿ ಎಂದು ಆಶಿರ್ವದಿಸಿದರು.
ಈ ವೇಳೆ ತಮ್ಮ 88ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಈ ಘಟಕ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ಅರಣ್ಯ ಹಾಗೂ ಸಹಕಾರ ಸಚಿವ ಎಸ್.ಎಸ್.ಪಾಟೀಲ್ ಮಾತನಾಡಿ, ಪ್ರತಿಯೊಬ್ಬ ರೈತರು ಸಾವಯುವ ಗೊಬ್ಬರವನ್ನು ಬಳಸುವುದರಿಂದ ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಯಿಂದ ಉತ್ತಮವಾದ ಇಳುವರಿಯನ್ನು ಪಡೆದು ಹೆಚ್ಚು ಆದಾಯವನ್ನು ಮಾಡಬಹುದು. ಹೀಗಾಗಿ ಈ ದೇಶದ ಯುವಕರು ಸದೃಡವಾಗಿ ಬದುಕಬೇಕಾದರೆ ದುಡಿಮೆಯಲ್ಲಿ ನಿರತರಾಗಬೇಕು. ಅಂದಾಗ ಮಾತ್ರ ನಾವು ಸಾಧನೆಯನ್ನು ಮಾಡಲು ಸಾಧ್ಯ. ಆದ್ದರಿಂದ ಇಂದಿನ ಯುವಕರು ದುಶ್ಛಟಗಳಿಂದ ಮುಕ್ತರಾಗಿ ದುಡಿಮೆಗೆ ಹೆಚ್ಚು ಆಧ್ಯತೆಯನ್ನು ನೀಡಬೇಕಾಗಿದೆ. ಅಲ್ಲದೇ ಈ ಪಾಟೀಲ್ ಸಹೋದರರು ಪಟ್ಟ ಶ್ರಮದಿಂದ ಇಂತಹ ದೊಡ್ಡದಾದ ಫ್ಯಾಕ್ಟರಿ ಕಟ್ಟಲು ಸಾಧ್ಯವಾಯಿತು.
ರೋಣ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಪ್ರತಿಯೊಬ್ಬರೂ ಕಾಯಕ ನಿಷ್ಠೆ ಕೆಲಸ ಮಾಡುವಲ್ಲಿ ಮುಂದಾಗಬೇಕು. ಅಂದಾಗ ಇಂತಹ ಫ್ಯಾಕ್ಟರಿ ಕಟ್ಟಬಹುದು. ಆದ್ದರಿಂದ ಮಾಜಿ ಸಚಿವ ಎಸ್.ಎಸ್.ಪಾಟೀಲ್ ಇವರು ಒಬ್ಬ ಉತ್ತಮ ರಾಜಕಾರಣಿ. ಇವರು ಹಾಗೂ ನಮ್ಮ ತಂದೆಯವರು ಉತ್ತಮ ಬಾಂದವ್ಯವನ್ನು ಹೊಂದಿದ್ದರು. ಇವರ ಹುಟ್ಟು ಆಚರಿಸುತ್ತಿರುವುದು ಸಂತಸ ಕೆಲಸ ಎಂದರು.
ಈ ವೇಳೆ ಶ್ರೀ ಗೋಣಿರುದ್ರ ಮಹಾಸ್ವಾಮಿಗಳು ಸಾನಿದ್ಯವಹಿಸಿದ್ದರು. ಮಾರ್ಕೆಟಿಂಗ್ ಹಾಗೂ ಕಮ್ಯೂನಿಕೇಶನ ನಿಗಮದ ಅಧ್ಯಕ್ಷ ಎಂ.ಎಸ್.ಕರಿಗೌಡರ, ಜಿ.ಪಂ.ಮಾಜಿ ಅಧ್ಯಕ್ಷೆ ಶೋಭಾ ಮೇಟಿ, ತಹಶಿಲ್ದಾರ ಆಶಪ್ಪ ಪೂಜಾರ, ಸಹದೇವ ಯರಗುಪ್ಪಿ ಮಾತನಾಡಿದರು. ಹಾಗೂ ಪಾಟೀಲ್ ಕುಟುಂಬದ ಕಮಲಮ್ಮ ಎಚ್. ಪಾಟೀಲ್, ಲಿಂಗರಾಜಗೌಡ ಪಾಟೀಲ್, ಪ್ರಕಾಶಗೌಡ ಪಾಟೀಲ್, ಆನಂದಗೌಡ ಪಾಟೀಲ್, ಮಂಜುನಾಥಗೌಡ ಪಾಟೀಲ್ ಹಾಗೂ ಸಹ ಕುಟುಂಬದ ಎಲ್ಲ ಸದಸ್ಯರು ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಹೇಮಗೀರೀಶ ಹಾವಿನಾಳ, ಶಿವಕುಮಾರಗೌಡ ಪಾಟೀಲ್, ಕೆ.ವಿ.ಹಂಚಿನಾಳ, ರವೀಂದ್ರ ಉಪ್ಪಿನಬೆಟಗೇರಿ, ಕವಿತಾ ಉಳ್ಳಾಗಡ್ಡಿ, ಶಿವಪ್ಪ ಚಿಕ್ಕಣ್ಣವರ, ಜ್ಯೋತಿ ತಾರಿಕೊಪ್ಪ, ಭೀಮಸಿಂಗ್ ರಾಠೋಡ್, ಡಾ.ಬಿ.ಎಸ್.ಮೇಟಿ, ಎಸ್.ಬಿ.ಕರಿಭರಮಗೌಡ್ರ, ಡಿ.ಡಿ.ನೋರನಾಳ, ವೀರಣ್ಣ ತುಪ್ಪದ, ನಾಗರಾಜ ಹೊಂಬಳಗಟ್ಟಿ, ಬಸವರಾಜ ರಾಮೇನಹಳ್ಳಿ, ವೀರಣ್ಣ ಗಟ್ಟಿ, ಪ್ರದೀಪ್ ಗುಡದಪ್ಪನವರ, ಮೈಲಾರ್ಪ ಕಲಕೇರಿ, ಶ್ರೀನಿವಾಸ ಅಬ್ಬಿಗೇರಿ, ಪ್ರಹ್ಲಾದ ಹೊಸಮನಿ, ಸಂತೋಷ ಹಿರೇಮನಿ, ಪವನ ಮೇಟಿ, ಪ್ರಭು ಅಬ್ಬಿಗೇರಿ, ಕೊಟ್ರೇಶ ಅಂಗಡಿ ಹಾಗೂ ಇತರರು ಪಾಲ್ಗೊಂಡಿದ್ದರು.