ಬಳ್ಳಾರಿ

ಕೊರೊನಾ ಜನಜಾಗೃತಿ ವಾಹನಕ್ಕೆ ಎಸ್ಪಿ ಸಿ.ಕೆ.ಬಾಬಾ ಚಾಲನೆ

ಕೊರೊನಾ ಜನಜಾಗೃತಿ ವಾಹನಕ್ಕೆ ಎಸ್ಪಿ ಸಿ.ಕೆ.ಬಾಬಾ ಚಾಲನೆ

ಬಳ್ಳಾರಿ: ಜಿಲ್ಲಾ ಪೊಲೀಸ್ ಹಾಗೂ ಸನ್ಮಾರ್ಗ ಗೆಳೆಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿರುವ ಕೊರೊನಾ ಜನಜಾಗೃತಿ ವಾಹನಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಎಸ್ಪಿ ಕಚೇರಿ ಆವರಣದಲ್ಲಿ ಸೋಮವಾರ ಚಾಲನೆ ನೀಡಿದರು.

   ಈ ಕೊರೊನಾ ಜನಜಾಗೃತಿ ವಾಹನವು ಮೊದಲಿಗೆ ಬಳ್ಳಾರಿ ನಗರದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಲಿದ್ದು, ತದ ನಂತರ ಜಿಲ್ಲೆಯಾದ್ಯಂತ ಸಂಚರಿಸಲಿದೆ.

   ಚಾಲನೆ ನೀಡಿದ ನಂತರ ಮಾತನಾಡಿದ ಎಸ್ಪಿ ಸಿ.ಕೆ.ಬಾಬಾ ಅವರು ಕೊರೊನಾ ಮಹಾಮಾರಿ ದಿನೇ ದಿನೇ ವ್ಯಾಪಕವಾಗುತ್ತಿದ್ದು, ಇದರಿಂದ ಬಚವಾಗಬೇಕಾದರೇ ನಮಗಿರುವ ಮಾರ್ಗ ಒಂದೇ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲನೆ, ಕಡ್ಡಾಯ ಮಾಸ್ಕ್ ಧರಿಸುವಿಕೆ ಹಾಗೂ ಸ್ಯಾನಿಟೈಸ್ ಮಾಡುವಿಕೆ ಎಂದರು.

   ಕೊರೊನಾ ಬಂದ ತಕ್ಷಣ ಆತಂಕಗೊಳ್ಳದೇ ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಬೇಕು ಎಂದರು. ಈ ರೀತಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರಕಾರದ ಜತೆಗೆ ಸನ್ಮಾರ್ಗ ಗೆಳೆಯರ ಬಳಗ ಕೈಜೋಡಿಸಿರುವುದು ಸಂತಸದ ಸಂಗತಿ. ಹೆಚ್ಚೆಚ್ಚು ಸ್ವಯಂ ಸೇವಾ ಸಂಘಗಳು ಇಂತಹ ಕಾರ್ಯಗಳಲ್ಲಿ ಭಾಗಿಯಾಗಬೇಕು ಎಂದರು.

   ಈ ವಾಹನದಲ್ಲಿ ಜನಜಾಗೃತಿ ಮೂಡಿಸುವ ಸಂದೇಶಗಳ ಬೃಹತ್ ಫಲಕಗಳನ್ನ ಅಳವಡಿಸಲಾಗಿದೆ. ಇದರ ಜತೆಗೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಧ್ವನಿ ಸಂದೇಶವು ಪ್ರಸಾರವಾಗಲಿದೆ.

   ಈ ಸಂದರ್ಭದಲ್ಲಿ ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷರಾದ ಎಚ್.ಲಕ್ಷ್ಮಿಕಾಂತರೆಡ್ಡಿ, ಖಜಾಂಚಿ ತೇಜರಘುರಾಮರಾವ್, ಬಳಗದ ಕಾರ್ಯದಶರ್ಿ ಕಪ್ಪಗಲ್ ಬಿ.ಚಂದ್ರಶೇಖರ ಆಚಾರ್ ಮತ್ತಿತರರು ಇದ್ದರು.


ಸುದ್ದಿ ಓದಿ