ಎಸ್ ಎಲ್ ಯಲಿಗಾರ ಅವರು ಭಕ್ತರೊಂದಿಗೆ ಸ್ಪಂದಿಸುತ್ತಿದ್ದರು : ಎಸ್ ಪಿ ಬಿ ಮಹೇಶ
ಉಗರಗೋಳ,29: ದಕ್ಷ ಅಧಿಕಾರಿಯಾಗಿದ್ದ ಎಸ್ ಎಲ್ ಯಲಿಗಾರ ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವುದರ ಜೊತೆಗೆ ಅಧಿಕಾರಿಗಳು ಹಾಗೂ ಭಕ್ತರೊಂದಿಗೆ ಸ್ಪಂದಿಸುತ್ತಿದ್ದರು ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಯಲ್ಲಮ್ಮಾ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಪಿ ಬಿ ಮಹೇಶ ಹೇಳಿದರು.
ಶ್ರೀಕ್ಷೇತ್ರ ಶ್ರೀ ರೇಣುಕಾ ಯಲ್ಲಮ್ಮಾ ದೇವಸ್ಥಾನದ ಗರ್ಭಗುಡಿಯಲ್ಲಿ ಸೇವಾ ನಿವೃತ್ತಿ ಹೊಂದಿದ, ಯಲ್ಲಮ್ಮಾ ದೇವಸ್ಥಾನದ ಮ್ಯಾನೇಜರ ಎಸ್ ಎಲ್ ಯಲಿಗಾರ ಬಿಳ್ಕೊಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಧಿಶಕ್ತಿ ಯಲ್ಲಮ್ಮಾ ದೇವಸ್ಥಾನದಲ್ಲಿನ ಕೇಲಸ ದೇವರ ಕೇಲಸ ವಿದ್ದಂತೆ ಪ್ರತಿ ಸಿಬ್ಬಂದಿ ತಮಗೆ ವಹಿಸಿದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಸರಕಾರಿ ಸೌಲಭ್ಯಗಳನ್ನು ದೇವಸ್ಥಾನಕ್ಕೆ ಶ್ರೀದೇವಿಯನ್ನು ಅರಿಶಿ ಬರುವಂತ ಪ್ರತಿಯೊಬ್ಬ ಭಕ್ತರಿಗೂ ತಲುಪಿಸಲು ಶ್ರಮಿಸಬೇಕು ಎಂದರು.
ದೇವಸ್ಥಾನ ಅಧೀಕ್ಷಕಿ ನಾಗರತ್ನಾ ಚೋಳಿನ, ಪಂಡಿತ ರಾಜಶೇಖರಯ್ಯ, ಅರ್ಚಕ ರೇಣ್ಕಿಗೌಡ ಪರಶಋಷಿ, ಡಿ ಆರ್ ಚವ್ಹಾಣ, ನಾಗರಾಜ ಬಡೆಪ್ಪನವರ, ಎಮ್ ಪಿ ಧ್ಯಾಮನಗೌಡ್ರ, ಎಸ್ ಆರ್ ಪವಾರ, ಆರ್ ಸಿ ಬೆಳವಡಿ, ಆಯ್ ಸಿ ಕಗದಾಳ, ವ್ಹಿ ಆರ್ ನೀಲಗುಂದ, ಸಿ ಎನ್ ಕುಲಕರ್ಣಿ, ಪಿ ಎಸ್ ಹಂಜಗಿ, ಜಿ ಎಮ್ ಗಡೆಕಾರ, ಮಲ್ಲು ಬಿಳಗಿ, ಎಸ್ ಎಸ್ ಕರಿಕಟ್ಟಿ, ಎಫ್ ಆರ್ ಯಕ್ಕುಂಡಿ, ಆರ್ ಎಸ್ ಶೀಂಧೆ, ಎಮ್ ಎ ಸುಣಗಾರ, ಜಿ ಎಮ್ ಕುಲಕರ್ಣಿ, ಅನೀಲ ಹುಡಿಮನಿ, ಜಗದೀಶ ರೇವಣ್ಣವರ, ಶಿವು ನೇಸರಿಗಿ, ರವಿ ಹೂಲಿ, ಜಿ ಎಸ್ ಮಂತಗಿ, ಚಂದ್ರು ಹಿರೇಕೆಂಚನ್ನವರ, ಬಿ ಸಿ ಕೋಟಗಿ, ಶಾಮಿಯಾನ ಬಾಲಾಜಿ, ಬಸವರಾಜ ಗುಜನಾಳ, ಗೊವಿಂದರಾವ್ ಕುಲಕರ್ಣಿ, ಹಾಗೂ ದೇವಸ್ಥಾನದ ಸಿಬ್ಬಂದಿ ಇದ್ದರು.