ಹ್ಯಾಟ್ರಿಕ್ ಹೀರೋ ಶಿವಣ್ಣನ ಸಿನಿ ಜರ್ನಿ @ 35 : ಶುಭ ಕೋರಿದ ಕಿಚ್ಚ
ಬೆಂಗಳೂರು, ಫೆ 20 :ಚಿತ್ರರಂಗದಲ್ಲಿ 35 ವರ್ಷಗಳ ಪಯಣ ಪೂರೈಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಸ್ಯಾಂಡಲ್ ವುಡ್ ನ ನಟ,ನಟಿಯರು, ಅಭಿಮಾನಿಗಳು ಶುಭ ಕೋರಿದ್ದಾರೆ.ಕಿಚ್ಚ ಸುದೀಪ್ ಅವರೂ ಸಹ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದು, 'ಚಿತ್ರದಲ್ಲಿ 35 ವರ್ಷ ಪೂರ್ಣಗೊಳಿಸಿದ ವರ್ಸಟೈಲ್ ನಟ ಶಿವಣ್ಣ ಅವರಿಗೆ ಶುಭಾಶಯಗಳು. ದೊಡ್ಡ ಸಾಧನೆ ಇದು. ಚಿತ್ರರಂಗದಲ್ಲಿ ನೀವು ಮೈಲುಗಲ್ಲು ಸಾಧಿಸಿದ್ದೀರಿ. ಸಂತೋಷವಾಗಿರಿ' ಎಂದು ಹೇಳಿದ್ದಾರೆ.ಶುಕ್ರವಾರ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ 35 ವರ್ಷಗಳ ಸಂಭ್ರಮ ಆಚರಿಸಿಕೊಂಡಿರುವ ಶಿವಣ್ಣ, ಎಲ್ಲರ ಪ್ರೀತಿಯಿಂದ ನನಗೆ ಇಷ್ಟು ಎನರ್ಜಿ ಇದೆ. ಇಷ್ಟು ವರ್ಷ ಸಹಕರಿಸಿದವರಿಗೆ ಧನ್ಯವಾದ ಎಂದಿದ್ದರು. ಇನ್ನು, ನಟ ಸುದೀಪ್ ಸಹ ಸಿನಿ ರಂಗದಲ್ಲಿ 25 ವರ್ಷ ತುಂಬಿದ ಸಂತಸವನ್ನು ಸಂಭ್ರಮಿಸಿದ್ದರು. ತಮ್ಮ ಸಿನಿ ಜರ್ನಿಯ ಏರುಪೇರಿನ ಅನುಭವಗಳನ್ನು ಹಂಚಿಕೊಂಡಿದ್ದರು.