ರಾಷ್ಟ್ರೀಯ

ಶೀಘ್ರದಲ್ಲೇ ಶಾಲೆಗಳ ಪುನಾರಂಭ: ಪೋಖ್ರಿಯಾಲ್‌ ಆಶಯ

ಶೀಘ್ರದಲ್ಲೇ ಶಾಲೆಗಳ ಪುನಾರಂಭ: ಪೋಖ್ರಿಯಾಲ್‌ ಆಶಯ

ನವದೆಹಲಿ, ಡಿ 10: ವಿದ್ಯಾರ್ಥಿಗಳು ಆದಷ್ಟು ಶೀಘ್ರದಲ್ಲೇ ಶಾಲೆಗಳಿಗೆ ಮರಳಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್‌ ನಿಶಾಂಕ್‌ ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಂವಾದ ಕಾರ್ಯಕ್ರಮದ 11ನೇ ಆವೃತ್ತಿಯಲ್ಲಿ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪೋಖ್ರಿಯಾಲ್‌, ಶಾಲೆಗಳು ಮುಚ್ಚಿದ್ದರೂ, ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಶಿಕ್ಷಣವನ್ನು ಮುಂದುವರಿಸಿರುವುದು ಶ್ಲಾಘನೀಯ ವಿಷಯ ಎಂದರು. ವಿದ್ಯಾರ್ಥಿಗಳು ಶೀಘ್ರದಲ್ಲೇ ಶಾಲೆಗಳಿಗೆ ಮರಳಲಿದ್ದಾರೆ ಮತ್ತು ಶಿಕ್ಷಕರು ಶಿಕ್ಷಣ ಪ್ರಕ್ರಿಯೆ ಮುಂದುವರಿಸಲಿದ್ದಾರೆ ಎಂದು ಅವರು ಭರವಸೆ ನೀಡಿದರು.

ಕೋವಿಡ್ ಕಾಲದಲ್ಲಿ ಶಿಕ್ಷಣ ಸಚಿವಾಲಯ ಡಿಜಿಟಲ್ ಶಿಕ್ಷಣಕ್ಕಾಗಿ ಮಾಡಿದ ಕಾರ್ಯಗಳ ವಿವರಿಸಿದ ಪೋಖ್ರಿಯಾಲ್‌, ವಿದ್ಯಾರ್ಥಿಗಳ ಉತ್ಸಾಹವನ್ನು ಗಮನದಲ್ಲಿಟ್ಟುಕೊಂಡು, ಸ್ವಾವಲಂಬಿ ಭಾರತ ಅಭಿಯಾನದಡಿಯಲ್ಲಿ ಪಿಎಂ ಇ-ವಿದ್ಯಾ ದಂತಹ ಸಮಗ್ರ ಉಪಕ್ರಮವನ್ನು ಪ್ರಾರಂಭಿಸಲಾಗಿದೆ , ಇದು ಡಿಜಿಟಲ್ , ಆನ್‌ಲೈನ್ , ರೇಡಿಯೊ ಸಹಾಯದಿಂದ ಸುಮಾರು 33 ಕೋಟಿ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದೆ. ದೀಕ್ಷಾ, ಸ್ವಯಂ, ಸ್ವಯಂ ಪ್ರಭಾ, ಐಐಟಿ ಪಾಲ್, ಶಿಕ್ಷವಾಣಿ ಪಾಡ್‌ಕ್ಯಾಸ್ಟ್, ಸೈನ್ ಲಾಂಗ್ವೇಜ್ ಮುಂತಾದ ಕಾರ್ಯಕ್ರಮಗಳು ಶಿಕ್ಷಣವನ್ನು ಸುಲಭವಾಗಿಸಿದೆ ಎಂದರು. 

ಸುದ್ದಿ ಓದಿ