ವಿಜಯಪುರ

ಎಸ್‌ಸಿ-ಎಸ್ ಟಿ ಜನಾಂಗದ ಕುಂದುಕೊರತೆಗಳ ಸಭೆ

ಎಸ್‌ಸಿ-ಎಸ್ ಟಿ ಜನಾಂಗದ ಕುಂದುಕೊರತೆಗಳ ಸಭೆ
SC/ST grievances meeting

ವಿಜಯಪುರ 28: ಜಿಲ್ಲೆಗೆ ​ಪ್ರಪ್ರಥಮ ಬಾರಿ ಆಗಮಿಸಿದ್ದ ಎಸ್ ಸಿ-ಎಸ್ ಟಿ ಆಯೋಗದ ಅಧ್ಯಕ್ಷರಾದ ಡಾ. ಮೂರ್ತಿ.ಎಲ್ ರವರ ಉಪಸ್ಥಿತಿಯಲ್ಲಿ ಎಸ್‌ಸಿ-ಎಸ್ ಟಿ ಜನಾಂಗದ ಕುಂದುಕೊರತೆಗಳ ಸಭೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.

ಈ ಸಭೆಯಲ್ಲಿ ಜಿಲ್ಲೆಯ ಎಲ್ಲ ದಲಿತಪರ ಸಂಘಟನೆಗಳು ಪಾಲ್ಗೊಂಡು ತಮ್ಮ ಅಹವಾಲನ್ನು ಹೇಳುವುದರ ಜೊತೆಗೆ ಮನವಿ ಕೂಡಾ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಪರವಾಗಿ ರಾಷ್ಟ್ರೀಯ ಬಂಜಾರ ಪರಿಷದ್ ನ ರಾಜ್ಯಾಧ್ಯಕ್ಷರಾದ ಪ್ರಕಾಶ ಬಾಳು ಚವ್ಹಾಣರವರು ಜಿಲ್ಲೆಯಲ್ಲಿರುವ ಕೆಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತ ಪ್ರಸ್ತುತ ಗುಳೆ ಹೋಗುವ ಜನಾಂಗದ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿಲ್ಲ ಇಂತಹ ಮಕ್ಕಳಿಗೆ ವಿಶೇಷ ಆದ್ಯತೆ ನೀಡಿ ಪ್ರತ್ಯೇಕ ವಸತಿ ಸಮೇತ ಹಾಸ್ಟೆಲ್ ನಿರ್ಮಿಸಿ ಶಿಕ್ಷಣ ನೀಡಬೇಕು, ಜಿಲ್ಲೆಯ ಹಲವು ತಾಂಡಗಳಲ್ಲಿ ರುದ್ರಭೂಮಿ(ಸ್ಮಶಾನ)ಗಳು ಇರುವದಿಲ್ಲ ಎಂದು ತಿಳಿಸಿದರು,  ಇಟ್ಟಠಹಾಳ ತಾಂಡದಲ್ಲಿರುವ ಸರ್ಕಾರಿ ಜಾಗದಲ್ಲಿ ಸುಮಾರು 40 ವರ್ಷಗಳಿಂದ ವಾಸ ಮಾಡುತ್ತಿದ್ದ ಜನತೆ ದುಡಿಯಲು ಗುಳೆ ಹೋದಾಗ ಏಕಾಏಕಿ ಯಾವದೇ ಮುನ್ಸೂಚನೆ ನೀಡದೆ ನೂರಾರು ಮನೆಗಳನ್ನು ನೆಲಸಮ ಮಾಡಿ ಜಿಲ್ಲಾಡಳಿತ ಘೋರ ಅನ್ಯಾಯ ಮಾಡಿದೆ ಈ ನೊಂದ ಜನತೆಗೆ ಇನ್ನುವರೆಗೂ ಮನೆಗಳಾಗಲಿ ಅಥವಾ ಜಾಗವಾಗಲಿ ಸಿಗುತ್ತಿಲ್ಲ ಇದರ ಕಡತ ಜಿಲ್ಲಾಧಿಕಾರಿಗಳ ಬಳಿ ಇದ್ದು ಇಲ್ಲಿಯವರೆಗೆ ಯಾವುದೇ ಕ್ರಮ ಕೈಕೊಂಡಿರುವುದಿಲ್ಲ ಎಂದು ಆಪಾದನೆ ಮಾಡಿದರು, ಅದೇರೀತಿ ತೊರವಿ ಎಲ್ ಟಿ ನಂಬರ್ 1 ರಲ್ಲಿ ನೂರಾರು ವರ್ಷಗಳಿಂದ ವಾಸವಿದ್ದ ಬಂಜಾರ ಸಮುದಾಯದ ಜನತೆಯನ್ನು ಕೆಲವು ಪಟ್ಟಬದ್ಧ ಹಿತಾಸಕ್ತಿಗಳು ಸೇರಿಕೊಂಡು ನಮ್ಮನ್ನು ಆ ಜಾಗದಿಂದ ಖಾಲಿ ಮಾಡಿಸುವ ಹುನ್ನಾರ ಮಾಡುತ್ತಿದ್ದಾರೆ ಇದರ ಬಗ್ಗೆ ಗಮನಿಸಿ ನಮ್ಮ ಜನತೆಗೆ ನ್ಯಾಯ ದೊರಕಿಸಬೇಕೆಂದು ಮನವಿ ಸಲ್ಲಿಸಲಾಯಿತು. ಹಾಗೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮ ಎಂದು ಘೋಷಣೆ ಮಾಡಿದೆ ಆದರೆ ಇನ್ನುವರೆಗೂ ಹಕ್ಕು ಪತ್ರ ನೀಡಿಲ್ಲ ತಾವುಗಳು ಸೂಕ್ತ ಕ್ರಮ ಕೈಕೊಂಡು ನಮಗೆ ಹಕ್ಕು ಪತ್ರ ದೊರಕಿಸಿಕೊಡಬೇಕೆಂದು ವಿನಂತಿಸಿದರು.ನಮ್ಮ ಜಿಲ್ಲೆಯಲ್ಲಿ ಲವ್ ಜಿಹಾದ್ ಎಗ್ಗಿಲ್ಲದೆ ನಡೆಯುತ್ತಿದೆ ಶಾಲಾ ಕಾಲೇಜುಗಳಲ್ಲಿ  ಕಲಿಯುತ್ತಿರುವ ಮುಗ್ದ ಬಾಲಕಿಯರನ್ನು ಮನವೊಲಿಸಿ ರಿಜಿಸ್ಟರ್ ಮದುವೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ ರಿಜಿಸ್ಟರ್ ಮಾಡುವ ಸಂಧರ್ಭದಲ್ಲಿ ಇಬ್ಬರ ಜಾತಿ ಯಾವದೂ ಅಂತ  ಪರೀಶೀಲನೆ ಮಾಡದೇ ಅಧಿಕಾರಿಗಳು ನೇರವಾಗಿ ರಿಜಿಸ್ಟರ್ ಮದುವೆ ಮಾಡಿಸಿ ಅನ್ಯಾಯ ಮಾಡುತ್ತಿದ್ದಾರೆ. ಸ್ವ ಜಾತಿಯವರೇ ರಿಜಿಸ್ಟರ್ ಮದುವೆ ಮಾಡಿಕೊಳ್ಳಬೇಕಾದರೆ ನೂರಾರು ಪ್ರಶ್ನೆ ಕೇಳುವ ಅಧಿಕಾರಿಗಳು ಅನ್ಯ ಜಾತಿಯವರು ಬಂದರೇ ಏಕೆ ಪ್ರಶ್ನೆ ಮಾಡುವದಿಲ್ಲ ಎಂದು ಆಯೋಗದ ಮುಂದೆ ಪ್ರಶ್ನೆ ಮಾಡಿದರು ಇದಕ್ಕೆ ಸ್ಪಂದಿಸಿದ ಆಯೋಗದ ಅಧ್ಯಕ್ಷರು ಈ ಎಲ್ಲ ವಿಷಯಗಳು ಗಂಭೀರವಾಗಿವೆ ಇದಕ್ಕೆ ಸೂಕ್ತ ಕ್ರಮ ಕೈಕೊಳ್ಳುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಆಯೋಗದ ಎಲ್ಲ ಸದಸ್ಯರುಗಳು,ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಧಿಕಾರಿಗಳಾದ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷಣ ನಿಂಬರಗಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೊತ್ತದಾರ, ವಾರ್ತಾಧಿಕಾರಿಗಳಾದ ಅಂಬರೀಶ್ ದೊಡಮನಿ, ಗೋಪಾಲ ಮಹಾರಾಜ್, ರಾಜಪಾಲ ಚವ್ಹಾಣ, ಸುರೇಶ ಬಿಜಾಪುರ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಯ ನೂರಾರು ಜನತೆ ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ