ಮನರಂಜನೆ

‘ನಟಿ ಸಂಜನಾಗೆ ಬಲವಂತದ ಮತಾಂತರವಾಗಿದೆ’ ಮೌಲ್ವಿ ವಿರುದ್ಧ ದೂರು

‘ನಟಿ ಸಂಜನಾಗೆ ಬಲವಂತದ ಮತಾಂತರವಾಗಿದೆ’ ಮೌಲ್ವಿ ವಿರುದ್ಧ ದೂರು

ಬೆಂಗಳೂರು, ಡಿ 14: ಡ್ರಗ್ಸ್‌ ಜಾಲ ಪ್ರಕರಣದಲ್ಲಿ ಮೂರು ತಿಂಗಳು ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಬಂದಿರುವ ನಟಿ ಸಂಜನಾ ಗಲ್ರಾನಿ ರೆಸಾರ್ಟ್ ವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.ಹಾಗಂತ ಸಂಪೂರ್ಣ ನಿರಾಳವಾಗಿರಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಸಂಜನಾರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಆರೋಪಿಸಿ ಬೆಂಗಳೂರು ನಗರದ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಟ್ಯಾನರಿ ರಸ್ತೆಯ ದಾರುಲ್ ಉಲಮ್ ಶಾವಲಿಲುಲ್ಲಾ ಎಂಬ ಮೌಲ್ವಿ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಕೀಲ ಅಮೃತೇಶ್ ಎನ್ನುವವರು ಮೌಲ್ವಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಸಂಜನಾ ಅವರನ್ನು 2018 ಅಕ್ಟೋಬರ್ 09 ರಂದು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಳಿಸಿ, "ಮಹಿರಾ" ಎಂದು ಮರುನಾಮಕರಣ ಸಹ ಮಾಡಿದ್ದಾರೆ. ಇದಕ್ಕೆ ದಾಖಲೆಯಾಗಿ ಮರುನಾಮಕರಣ ಮಾಡಿದ ಪ್ರಮಾಣಪತ್ರ ಸಹ ನೀಡಲಾಗಿದೆ. ಆದರೆ ಈ ಮತಾಂತರ ನಟಿಯ ಇಚ್ಚೆಗೆ ವಿರುದ್ಧ, ಬಲವಂತದಿಂದ ನಡೆದಿದೆ ಎಂದು ಎಫ್​​​ಐಆರ್ ದಾಖಲಾಗಿದೆ.ಈ ಸಂಬಂಧ ಕಾಟನ್‌ಪೇಟೆ ಪೊಲೀಸರು ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರುಗಿಸಲು ತೀರ್ಮಾನಿಸಿದ್ದಾರೆ. ನಟಿ ಸಂಜನಾ ಕಾರ್ಡಿಯಾಲಜಿಸ್ಟ್ ಆಗಿರುವ ಡಾ. ಅಜೀಜ್ ಎನ್ನುವವರೊಂದಿಗೆ ಮದುವೆಯಾಗಿದ್ದರೆಂದು ಹೇಳಲಾಗುವ ಫೋಟೋ ಒಂದು ಕೆಲ ದಿನಗಳ ಹಿಂದೆ ಸಾಮಾಜಿಕ ತಾಣದಲ್ಲಿ ಹರಿದಾಡಿತ್ತು. ಆ ವೇಳೆ ಸಂಜನಾ ಇಸ್ಲಾಂಗೆ ಮತಾಂತರವಾಗಿ ಹೆಸರು ಬದಲಿಸಿಕೊಂಡಿದ್ದರೆಂಬ ಬಗ್ಗೆ ದಾಖಲೆಗಳು ಸಿಕ್ಕಿವೆ ಎನ್ನಲಾಗಿತ್ತು. 

ಸುದ್ದಿ ಓದಿ