ಎಸ್.ಡಿ.ಮುಡೆಣ್ಣವರರಿಗೆ ಯುವ ಕಾರ್ಯರ್ಷಿ ಪ್ರಶಸ್ತಿ
S.D. Mudennavara receives Young Worker Award
ಮುಂಡಗೋಡ 09: ಪಟ್ಟಣದ ಆದಿ ಜಾಂಬವ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ. ಎಸ್. ಡಿ. ಮುಡೆಣ್ಣವರ.ಇವರಿಗೆ ಯುವ ಕಾರ್ಯರ್ಷಿ ಪ್ರಶಸ್ತಿ- 2025 ಪ್ರಶಸ್ತಿ ಯನ್ನು ನೀಡಿ ಸನ್ಮಾನ ಮಾಡಿ ಗೌರವಿಸಲಾಯಿತು. ತ್ರಿವರ್ಣ ಫೌಂಡೇಶನ್ ಅಂದ್ರ ಪ್ರದೇಶ ರಾಜ್ಯದ ಸಂಸ್ಥೆಯಿಂದ ಸುಮಾರು 10 ರಾಜ್ಯಗಳ ಕವಿಗಳು ಮತ್ತು ಸಾಹಿತಿಗಳ ರಾಷ್ಟೀಯ ಕಾವ್ಯ ಉತ್ಸವ-6 ರನ್ನು ಅಂದ್ರ ಪ್ರದೇಶ ಸರ್ಕಾರದಲ್ಲಿ ಚೆರ್ಮನ್ ಆಗಿ ಸೇವೆ ಸಲ್ಲಿಸಿದ ಕಲಾರತ್ನ ಶ್ರೀ. ಪೋಟ್ಲರಿ ಹರಿಕೃಷ್ಣ ರವರ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರದ ರಾಜಧಾನಿಯಾದ ಹೈದರಾಬಾದ್ ನ ಬಿರ್ಲಾ ಮಂದಿರ ಹತ್ತಿರವಿರುವ ಬಿರ್ಲಾ ತರಾಲಯದ ಬಾಸ್ಕರ್ ಆಡಿಟೋರಿಯಂನಲ್ಲಿ ರಾಷ್ಟೀಯ ಕಾವ್ಯ ಉತ್ಸವ 6 ರ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಪ್ರಶಸ್ತಿಯನ್ನು ಕಲಾರತ್ನ ಪೋಟ್ಲರಿ ಹರಿಕೃಷ್ಣ ಅಧ್ಯಕ್ಷರು ತ್ರಿವರ್ಣ ಪೌಡೇಶನ್ ಅಂದ್ರ ಪ್ರದೇಶ ತೆಲಂಗಾಣ ರಾಷ್ಟ್ರದ ಪದ್ಮಶ್ರೀ ಹಾಗೂ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ ಪುರಸ್ಕಾರ ಪಡೆದ ಕೊಲಕುರ್ ಇನಾಕ್ ಹಾಗೂ ತೆಲಂಗಾಣ ಸಾಹಿತ್ಯ ಸಮ್ಮೇಳನ ಅಧ್ಯಕ್ಷಿಣಿಯಾದ ನಂದಿನಿ. ಸುಬ್ಬಾ ರೆಡ್ಡಿ ತೆಲಂಗಾಣ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಠ್ಠಲ ಜೋಶಿ ಮತ್ತು ನಿವೃತ್ತ ವರಿಷ್ಟಾಧಿಕಾರಿಗಳು ಮತ್ತು ತೆಲಂಗಾಣ ವಿಧಾನ ಪರಿಷತ್ತು ಸದಸ್ಯರಾದ ಇಕ್ಬಾಲ್ ರವರು ಪತ್ರಿಕೆಯ ಸಂಪಾದಕ ಬೈಸಾ. ದೇವಿದಾಸ ಮತ್ತು ತೆಲಂಗಾಣದಲ್ಲಿರುವ ಕನ್ನಡ ಕವಿಯತ್ರಿ ಹಾಗೂ ಸಾಹಿತಿಗಳಾದ ನವೀನಾ ದೇಶಪಾಂಡೆ ದೇಶದ ವಿವಿಧ ರಾಜ್ಯದ ಸಾಹಿತಿಗಳು ಮತ್ತು ಕವಿಗಳು ಮುಂತಾದವರು ಹಾಜರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 