ಬಳ್ಳಾರಿ

ಉಪಾಧ್ಯಕ್ಷರಾಗಿ ಎಸ್‌. ದ್ರಾಕ್ಷಾಯಿಣಿ ಅವಿರೋಧ ಆಯ್ಕೆ

ಉಪಾಧ್ಯಕ್ಷರಾಗಿ ಎಸ್‌. ದ್ರಾಕ್ಷಾಯಿಣಿ ಅವಿರೋಧ ಆಯ್ಕೆ

ಬಳ್ಳಾರಿ 06: ಬಳ್ಳಾರಿ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಉಪಾಧ್ಯಕ್ಷ ಎಂ.ವೆಂಕಟೇಶ್ ಅವರ ರಾಜೀನಾಮೆಯಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನೂತನ ಉಪಾಧ್ಯಕ್ಷರಾಗಿ ಎಸ್‌.ದ್ರಾಕ್ಷಾಯಿಣಿ ಇವರು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿ ಸಹಕಾರ ಇಲಾಖೆಯ ಡಿ.ವೀರೇಶ್ ಕುಮಾರ್ ತಿಳಿಸಿದ್ದಾರೆ. ಉಪಾಧ್ಯಕ್ಷರ ಸ್ಥಾನದ ಉಳಿದ ಅವಧಿಗೆ ಇವರನ್ನು ಆಯ್ಕೆ ಮಾಡಲಾಯಿತು. ಬ್ಯಾಂಕಿನ ಅಧ್ಯಕ್ಷ ಬಿ.ನಾಗಭೂಷಣಗೌಡ ಹಾಗೂ ಆಡಳಿತ ಮಂಡಳಿ ನಿರ್ದೇಶಕರಾದ ಎಲ್‌.ಗೋವಿಂದನಾಯ್ಕ, ವಿ.ದೊಡ್ಡ ಕೇಶವರೆಡ್ಡಿ, ಬಿ.ಚಂದ್ರಶೇಖರ, ಕೆ.ಪಂಪಾಪತಿ, ಪಾಲಾಕ್ಷಪ್ಪ, ಸಮ್ಮತಗೇರಿ ಎ.ವೀರಾರೆಡ್ಡಿ, ಎಂ.ಕೇಶವರೆಡ್ಡಿ, ಕೆ.ಈರ​‍್ಪ, ಕೆ.ಪಾಲಾಕ್ಷಿರೆಡ್ಡಿ ಉಪಸ್ಥಿತರಿದ್ದರು. 


ಸುದ್ದಿ ಓದಿ