ಬಳ್ಳಾರಿ

ಮೇಲ್ಸೇತುವೆ ರಿಪೇರಿ ಸ್ಥಳದಲ್ಲಿ ವಾಸ್ತವ್ಯ ಹೂಡಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ

ಮೇಲ್ಸೇತುವೆ ರಿಪೇರಿ  ಸ್ಥಳದಲ್ಲಿ ವಾಸ್ತವ್ಯ ಹೂಡಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ
ಬಳ್ಳಾರಿ: ನ (03)ರಂದು ಬಳ್ಳಾರಿಯ ಬಿ.ಡಿ.ಹಳ್ಳಿ ಸಮೀಪ (ವೇದಾವತಿ ನದಿ) ಹಗರಿಗೆ ಅಡ್ಡಲಾಗಿ ಕಟ್ಟಲಾಗಿರುವ ತುಂಗಭದ್ರಾ ಕಾಲುವೆಯು ಮೇಲು ಸೇತುವೆಯ ರಿಪೇರಿ ಆಗುತ್ತಿರುವ ಕಾಮಗಾರಿ ಸ್ಥಳಕ್ಕೆ ರಾತ್ರಿ ಭೇಟಿ ನೀಡಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ರಾತ್ರಿಯಿಡೀ ಅಲ್ಲಿಯೇ ವಾಸ್ತವ್ಯ ಹೂಡಿದ್ದರು.
ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಹಗರಿ ನದಿಯ ಬಳಿಯೇ ರಾತ್ರಿಯಿಡೀ ವಾಸ್ತವ್ಯ ಹೂಡಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ರಾತ್ರಿಯಿಡೀ ಜಾಗರಣೆ ನಡೆಸಿದರು.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ಶಾಸಕ ಬಿ.ನಾಗೇಂದ್ರ ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ರಿಪೇರಿ ಕಾಮಗಾರಿ ಫೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದಾದ ನಂತರ ಆಂಧ್ರದ ಸಚಿವರು ಹಾಗೂ ಶಾಸಕರೊಂದಿಗೂ ಸಮಾಲೋಚನೆ ನಡೆಸಿದ್ದರು. ಆಂಧ್ರದ ಸಚಿವರು, ಶಾಸಕರು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದರಲ್ಲದೇ, ತುಂಗಭದ್ರಾ ಮಂಡಳಿಯ ಅಧಿಕಾರಿಗಳ ಮೇಲೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಡ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.
ಶಾಸಕರೊಂದಿಗೆ ಬಳ್ಳಾರಿ ತಹಶೀಲ್ದಾರ್ ವಿಶ್ವನಾಥ್, ಕಾಂಗ್ರೆಸ್ ಮುಖಂಡರಾದ ಬಿ.ವೆಂಕಟೇಶ ಪ್ರಸಾದ್, ಬಿ.ಮುರಳಿಕೃಷ್ಣ, ಬೆಣಕಲ್ ಬಸವರಾಜಗೌಡ, ಅಣ್ಣ ನಾಗರಾಜ, ಘನಶ್ಯಾಮಗೌಡ, ಸಿಂಧುವಾಳ ಗಾದಿಲಿಂಗನಗೌಡ, ಯರ್ರಗುಡಿ ಮುದ್ದಿಮಲ್ಲಯ್ಯ, ಹಗರಿ ಗೋವಿಂದ, ಬಿ.ಆರ್.ಎಲ್ ಸೀನಾ, ಮೋಕ ಸೀನಾ, ಗೋನಾಳ್ ನಾಗಭೂಷಣ ಗೌಡ, ಚಿನ್ನ, ಯರ್ರಗುಡಿ ಚಂದ್ರ, ಅನ್ವರ್ ಸೇರಿದಂತೆ ಹಲವರು ಹಾಜರಿದ್ದರು.

ಸುದ್ದಿ ಓದಿ