ತಾಳಿಕೋಟಿ

ಸಂಘಟನಾ ಕಾರ್ಯದರ್ಶಿಯಾಗಿ ರುದ್ರಗೌಡ ನೇಮಕ

ಸಂಘಟನಾ ಕಾರ್ಯದರ್ಶಿಯಾಗಿ ರುದ್ರಗೌಡ ನೇಮಕ

ತಾಳಿಕೋಟಿ: ಕರ್ನಾಟಕ ರಾಜ್ಯ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜ ಬೆಂಗಳೂರು ಇದರ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ರುದ್ರಗೌಡ ಸಿದ್ದನಗೌಡ ಬಿರಾದಾರ (ಅಸ್ಕಿ) ಇವರನ್ನು ನೇಮಕ ಮಾಡಲಾಗಿದೆ. 

ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಅಸ್ಕಿ ಗ್ರಾಮದ ನಿವಾಸಿಗಳಾದ ರುದ್ರಗೌಡ ಎಸ್‌. ಬಿರಾದಾರ ಅವರು ಹೊಂದಿದ ಸಾಮಾಜಿಕ ಕಳಕಳಿ ಕ್ರಿಯಾಶೀಲತೆ ಹಾಗೂ ಹೋರಾಟದ ಮನೋಭಾವವನ್ನು ಗುರುತಿಸಿ ಅವರಿಗೆ ಈ ಹುದ್ದೆಯನ್ನು ನೀಡಲಾಗಿದ್ದು, ಅವರು ಈ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡು ಸಮಾಜದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ರಾಜ್ಯದಲ್ಲಿ ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಆದೇಶಪತ್ರದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಶೇಖರಗೌಡ ಮಾಲೀಪಾಟೀಲ ತಿಳಿಸಿದ್ದಾರೆ 


ಸುದ್ದಿ ಓದಿ