ಜು.18ರಂದು ರೋಟರಿ ಕ್ಲಬ್ ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಮುಂಡಗೋಡ15: ರೋಟರಿ ಕ್ಲಬ್ ನ 2021-22 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 18 ರಂದು ಸಂಜೆ 7 ಘಂಟೆಗೆ ಪಟ್ಟಣದ ಟ್ರಿನಿಟಿ ಸಭಾಂಗಣದಲ್ಲಿ ಜರುಗಲಿದೆ ಎಂದು ನೂತನ ರೋಟರಿ ಕ್ಲಬ್ ಅಧ್ಯಕ್ಷ ಶಾಜಿ ಥಾಮಸ್ ಹೇಳಿದರು.
ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕೋವಿಡ್ ನಿಂದ ತೊಂದರೆ ಅನುಭವಿಸುತ್ತಿರುವ ಎಸ್.ಎಸ್.ಎಲ್.ಸಿ ಮಕ್ಕಳಿಗೆ ರೋಟರಿ ಕ್ಲಬ್ ನಿಂದ ವಿದ್ಯಾ ಸೇತು ಪುಸ್ತಕವನ್ನು ವಿತರಿಸಲಾಗುವುದು. ತಾಲೂಕಿನಲ್ಲಿ ಎಷ್ಟು ಶಾಲೆ ಹಾಗೂ ಎಷ್ಟು ಜನ ವಿದ್ಯಾರ್ಥಿಗಳಿದ್ದಾರೆಂಬ ಮಾಹಿತಿ ಕಲೆ ಹಾಕಿ ಗಣೀತ, ವಿಜ್ಞಾನ ಹಾಗೂ ಇಂಗ್ಲೀಷ್ ಪುಸ್ತಕವನ್ನು ವಿತರಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಚೇತನ್ ಕಲಾಲ ಮಾತನಾಡಿ, ರೋಟರಿ ಪೌಂಡೇಷನ್ ವತಿಯಿಂದ ಮಕ್ಕಳ ಆರೈಕೆ ಕೇಂದ್ರ ತೆರಯುವ ಪ್ರೊಜೆಕ್ಟ್ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಚಿಕ್ಕ ಮಕ್ಕಳಿಗೆ ಸ್ಥಳಿಯವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬಹುದು. ಈ ಪ್ರೊಜೆಕ್ಟ್ ಗೆ ಸಾಕಷ್ಟು ಜನ ದಾನಿಗಳು ಸ್ಪಂದಿಸಿದ್ದಾರೆ. ಮುಂದಿನ 3 ತಿಂಗಳೊಳಗಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ಹೇಳಿದರು.
ಕಾರ್ಯದರ್ಶಿ ಬೀಜು ವಿ.ಜೆ, ಕೋಶಾಧ್ಯಕ್ಷ ವಸಂತ ಕೊಣಸಾಲಿ, ಮಹೇಶ ಉಮ್ಮಚಗಿ, ಎಸ್.ಕೆ ಭೋರ್ಕರ ಮುಂತಾದವರು ಉಪಸ್ಥಿತರಿದ್ದರು.