ಜಮಖಂಡಿ

ವರುಣನ ಆರ್ಭಟಕ್ಕೆ ಮೇಲ್ಛಾವಣಿ ಕುಸಿದ: ಕುಟುಂಬದ ನಾಲ್ವರಿಗೆ ಗಾಯ

ವರುಣನ ಆರ್ಭಟಕ್ಕೆ ಮೇಲ್ಛಾವಣಿ ಕುಸಿದ: ಕುಟುಂಬದ ನಾಲ್ವರಿಗೆ ಗಾಯ

ಲೋಕದರ್ಶನ ವರದಿ,

ಜಮಖಂಡಿ20: ತಾಲೂಕಿನ ಸಾವಳಗಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಕುಟುಂಬದ ನಾಲ್ವರು ಸದಸ್ಯರಿಗೆ ಗಾಯವಾಗಿರುವ ಘಟನೆ ಜರುಗಿದೆ.

ನಗರದಲ್ಲಿ ಈಗತಾನೆ ಆರಂಭವಾಗಿರುವ ವರುಣನ ಆರ್ಭಟಕ್ಕೆ ನಲುಗಿದ ಸಾವಳಗಿ ಗ್ರಾಮದ ಮನೆಯೊಂದರ ಮೇಲ್ಚಾವಣಿ ಕುಸಿದ ಕಾರಣ ನಾಲ್ವರು ಗಾಯಗೊಂಡಿದ್ದು. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ 2 ದಿನದಿಂದ ಜಿಟಿಜಿಟಿ ವರುಣ ಆಗಮಿಸಿದ ಹಿನ್ನಲೆ ದೀಪಾ ಬಾಹುಬಲಿ ಬಾಗೇವಾಡಿ ಗಂಭೀರ ಗಾಯವಾಗಿದ್ದು ಹಾಗೂ ಮಕ್ಕಳಾದ ಐಶ್ವರ್ಯ ಮತ್ತು ಸಮರ್ಥ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. 

ಗಾಯಗೊಂಡ ಪರಿವಾರವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆ ದಾಖಲಾಗಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಎಲ್ಲಾ ವಸ್ತುಗಳು ಸಂಪೂರ್ಣ ದ್ವ್ವಂಸಗೊಂಡಿದ್ದು ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸುದ್ದಿ ಓದಿ