ಮುಂಡರಗಿ

ತಡರಾತ್ರಿಯ ಮಳೆಯಿಂದ ಮನೆಯೆ ಮೇಲ್ಛಾವಣಿ ಕುಸಿತ : ವ್ಯಕ್ತಿ ಸಾವು

ತಡರಾತ್ರಿಯ ಮಳೆಯಿಂದ ಮನೆಯೆ ಮೇಲ್ಛಾವಣಿ ಕುಸಿತ : ವ್ಯಕ್ತಿ ಸಾವು

ಮುಂಡರಗಿ : ಪಟ್ಟಣದ ಬ್ರಾಹ್ಮಣ ಬೀದಿಯ ಚವಡಿ ಎದುರಗಡೆ ಇರುವ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಅಶೋಕ ವೀರಭದ್ರ​‍್ಪ ಹಳ್ಳಿಕೇರಿ(60) ಎಂಬ ವ್ಯಕ್ತಿಯ ಮೇಲೆ ಮನೆಯ ಮೇಲ್ಛಾವಣಿ ಕುಸಿದು ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಗುರುವಾರ ಸಾಯಂಕಾಲ ಸಂಭವಿಸಿದೆ. 

ನಿನ್ನೆ ತಡರಾತ್ರಿ ಸುರಿದ ನಿರಂತರ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ನೀರಿನಿಂದ ಆವರಿಸಿಕೊಂಡಿತ್ತು. ಮೃತ ವ್ಯಕ್ತಿ ಮನೆಯಲ್ಲಿರುವಾಗ ಮನೆಯ ಹಿತ್ತಲ ಬಾಗಿಲಿನಲ್ಲಿ ಬಾಯಿ ತೊಳೆದುಕೊಳ್ಳುವ ವೇಳೆಯಲ್ಲಿ ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದರಿಂದ ಹೊರಗಡೆ ಕುಳಿತುಕೊಂಡಿದ್ದ ಮಕ್ಕಳು, ಸೊಸೆಯಂದಿರು ಓಡಿ ಬಂದು ನೋಡುವಷ್ಟರಲ್ಲಿಯೇ ಮೇಲ್ಚಾವಣಿ ಕುಸಿದು ಬೀಳುತ್ತಿದ್ದಂತೆಯೇ ಗಾಬರಿಗೊಂಡ ಕುಟುಂಬಸ್ಥರು ಕಿರುಚಾಡತೊಡಗಿದರು. ಕೂಡಲೇ ಸ್ಥಳಿಯ ಅಕ್ಕಪಕ್ಕದ ಮನೆಯ ಹಾಗೂ ಯುವಕರು ಸ್ಥಳಕ್ಕೆ ದೌಡಾಯಿಸಿ ಘಟನೆಯ ಕುರಿತು ಅಂಬ್ಯುಲೆನ್ಸ್‌ ಹಾಗೂ ಅಗ್ನಿ ಶಾಮಕ ದಳ ತಂಡಕ್ಕೆ ಮಾಹಿತಿ ನೀಡಿದರು.  

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಧಳ ಹಾಗೂ ಪೋಲಿಸ್ ಪಡೆಯವರು ರಕ್ಷಣಾ ಕಾರ್ಯಚರಣೆ ಮಾಡಲು ಪ್ರಾರಂಭಿಸಿದರು. ಮೇಲ್ಚಾವಣಿ ಹೆಚ್ಚು ನೆಲಕ್ಕೆ ಬಿದ್ದಿದ್ದರಿಂದ ಪುರಸಭೆಯ ಜೆಸಿಬಿ ಮೂಲಕ ಮಣ್ಣನ್ನು ಹೊರ ತೆಗೆಯಲು ಹರಸಾಹಸ ಮಾಡಿದರು. ಸುಮಾರು ಒಂದು ಘಂಟೆ ವೇಳೆ ಜೆಸಿಬಿಯಿಂದ ಕಾರ್ಯಾಚರಣೆ ಮಾಡಿದಾಗ ಮೃತದೇಹ ಪತ್ತೆಯಾಯಿತು. ಮೃತ ವ್ಯಕ್ತಿಯು ಅಶೋಕ ವೀರಭದ್ರ​‍್ಪ ಹಳ್ಳಿಕೇರಿ(60) ಎಂದು ಗುರುತಿಸಲಾಯಿತು. ನಂತರ ಶವವನ್ನು ಅಂಬ್ಯುಲೆನ್ಸ್‌ ಮೂಲಕ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತು. 

ಘಟನಾ ಸ್ಥಳಕ್ಕೆ ಆಗಮಿಸಿದ ತಾಲೂಕಾ ದಂಡಾಧಿಕಾರಿಗಳು ಮೃತರ ಕುಟುಂಬವನ್ನು ವಿಚಾರಿಸಿ ಸಾಂತ್ವಾನ ಹೇಳಿದರು. ಶವವನ್ನು ಹೊರ ತೆಗೆಯುವಲ್ಲಿ ಪೋಲಿಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳು ಹರಸಾಹಸಪಟ್ಟರು. 


ಸುದ್ದಿ ಓದಿ