ತಾಳಿಕೋಟಿ

ರಾಷ್ಟ್ರನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ: ಡಾ. ಪ್ರಭುಗೌಡ

ರಾಷ್ಟ್ರನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ: ಡಾ. ಪ್ರಭುಗೌಡ

ತಾಳಿಕೋಟಿ25:  ಒಂದು ಆರೋಗ್ಯಪೂರ್ಣ ಸಮಾಜ ಹಾಗೂ ಬಲಿಷ್ಠ ರಾಷ್ಟ್ರದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ನಾಡಿನ ಖ್ಯಾತ ನೇತ್ರತಜ್ಞ ಕಾಂಗ್ರೆಸ್ ಮುಖಂಡ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ತಿಳಿಸಿದರು. 

ತಾಲೂಕಿನ ಕಲಕೇರಿ ಗ್ರಾಮದ ಎಂಪಿಎಸ್ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮಯನ್ವಯಾಧಿಕಾರಿಗಳ ಕಾರ್ಯಾಲಯ ಸಿಂದಗಿ ವತಿಯಿಂದ ಹಮ್ಮಿಕೊಂಡ “ಜಿಲ್ಲಾ ಮಟ್ಟದ ಅತ್ಯತ್ತಮ ಶಿಕ್ಷಕ ಪ್ರಶಸ್ತಿ” ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಶಿಕ್ಷಕ ವೃತ್ತಿ ಕೇವಲ ಕೆಲಸವಲ್ಲ ಬದಲಾಗಿ ಸಮಾಜವನ್ನು ಪರಿವರ್ತಿಸುವ ಶಕ್ತಿ ಇರುವ ಅಗಾಧ ಸೇವೆ, ಶಿಕ್ಷಕರು ಮಕ್ಕಳಿಗೆ ಕೇವಲ ಅಕ್ಷರ ಜ್ಞಾನ ನೀಡದೆ ಅವರಿಗೆ ಉತ್ತಮ ಸಂಸ್ಕಾರ ನೀಡುವ ಅಗತ್ಯ ಇದೆ ಎಂದರು. 

ಇದೇ ಸಂದರ್ಭದಲ್ಲಿ ಈ ವರ್ಷದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಜಿ. ಡಿ. ನಾಡಗೌಡ, ವಿ. ಎಂ. ಕರಕಳ್ಳಿ(ರಾಜ್ಯಮಟ್ಟದ ಅತ್ಯುತ್ತಮ ಸಿಆರ್‌ಪಿ ಪ್ರಶಸ್ತಿ), ಪಿ ಆರ್ ಮುಜಾವರ(ಜ್ಞಾನಸಿರಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ), ಬಿ. ಎಸ್‌. ದೇವರಮನಿ( ಜ್ಞಾನಸಿರಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ), ಎಸ್‌. ಎಸ್‌. ಸಿದರಡ್ಡಿ(ಆದರ್ಶ ದೈಹಿಕ ಶಿಕ್ಷಕರು) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಗಣ್ಯರಾದ ವಿ. ಕೆ. ಜಾಲಹಳ್ಳಿಮಠ, ಶಿಕ್ಷಣ ಸಂಯೋಜಕ ಸುರೇಶ ಕೆರಿಗೊಂಡ, ಡಾ. ನಂದರಕುಮಾರ ಭೈರಿ, ಗ್ರಾ.ಪಂ. ಅಧ್ಯಕ್ಷ ನಜೀರ ಹೊನ್ನಳ್ಳಿ, ಉಪಾಧ್ಯಕ್ಷ ಅನೀಲ ಬಡಿಗೇರ, ಎಸ್‌ಡಿಎಂಸಿ ಅಧ್ಯಕ್ಷ ಪರುಶರಾಮ ವಡ್ಡರ, ಸದಸ್ಯ ರಾಜು ಸಿರಸಗಿ, ಎಚ್ ಎಂ ಬಿ ಎಸ್ ಬಗಲಿ, ವೈ ಆರ್ ಸಿರಸಗಿ, , ವಲಯ ಸಿಆರ್‌ಪಿಗಳಾದ ಎಂ ಕರಕಳಿಮಠ, ಸಂಜು ರಾಠೋಡ, ರಾಮಣ್ಣ ನಾಯ್ಕೋಡಿ, ಮಣೂರ ಇದ್ದರು. 


ಸುದ್ದಿ ಓದಿ