ಅಪಘಾತ ನಿಯಂತ್ರಣಕ್ಕೆ ರಸ್ತೆ ನಿಯಮ ಪಾಲನೆ ಅಗತ್ಯ: ಶೇಖರ್
ಬಳ್ಳಾರಿ 18: ಪ್ರಪಂಚದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ನಡೆಯುವುದು ನಮ್ಮ ದೇಶದಲ್ಲಿ ಇದಕ್ಕೆ ಕಾರಣ. ರಸ್ತೆ ನಿಯವiಗಳನ್ನು ಪಾಲಿಸದೇ ಇರುವುದು ವಾಹನಗಳನ್ನು ಸುಸ್ಥಿತಿಯಲ್ಲಿ ಇಡದೇ ಇರುವುದು, ಅಜಾಗುರಕತೆ ಹೀಗೆ ಹತ್ತು ಹಲವಾರು ಕಾರಣಗಳು. ಅದಕ್ಕಾಗಿ ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಿ ತಮ್ಮ ಕುಟುಂಬವನ್ನು ರಕ್ಷಿಸುತ್ತಾ, “ರಸ್ತೆ ಸುರಕ್ಷ ಜೀವನ ರಕ್ಷಾ” ಎಂಬ ಘೋಷಣ ವಾಕ್ಯದೊಂದಿಗೆ ಅಪಘಾತಗಳನ್ನು ತಪ್ಪಸೋಣ ಎಂದು ಆರ್.ಟಿ.ಓ. ಶೇಖರ್ ತಿಳಿಸಿದರು.
ನಗರದ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಮಾಸಕ್ಕೆ ಆರ್.ಟಿ.ಓ. ಚಾಲನೆ ನೀಡಿ ಅವರು ಮಾತನಾಡಿದರು.
ಉಪನ್ಯಾಸಕ ಎ.ಎರ್ರಿಸ್ವಾಮಿರವರು ಮಾತನಾಡುತ್ತಾ ಮಿತಿ ಮೀರಿದ ವೇಗ, ಪಾನಮತ್ತರಾಗಿ ಗಾಡಿ ಓಡಿಸುವುದು, ಮೊಬೈಲ್ ಬಳಕೆಯೊಂದಿಗೆ ಗಾಡಿ ಓಡಿಸುವುದು, ಸೀಟ್ಬೆಲ್ಟ್ ರಹಿತ ಚಾಲನೆ, ಹೆಲ್ಮ್ಟ್ ರಹಿತ ವಾಹನ ಚಲಾವಣೆಯಿಂದ 18 ವರ್ಷದ ಒಳಗಿನ ಮಕ್ಕಳು ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತವೆ. ಅಪಘಾತಗಳನ್ನು ತಪ್ಪಿಸಲು ಕಡ್ಡಾಯವಾಗಿ ಪಾಲಿಸೋಣ ರಸ್ತೆ ನಿಯಮಗಳನ್ನು ಎಂದರು.
ವೇದಿಕೆಯಲ್ಲಿ ಎ.ಆರ್.ಟಿ.ಓ. ಶ್ರೀನಿವಾಸಗಿರಿ, ಇನ್ಸ್ಪೆಕ್ಟರ್ ಪಿ.ವಿ.ರೆಡ್ಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರರಾದ ಚಂದ್ರಶೇಖರ್ ಆಚಾರ್ ಮತ್ತು ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.