ಹಗರಿಬೊಮ್ಮನಹಳ್ಳಿ

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಮನವಿ

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಮನವಿ

ಹಗರಿಬೊಮ್ಮನಹಳ್ಳಿ 04: ದಿನೇ ದನೇ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ವಿಧವಾ, ವೃಧ್ಧಪ್ಯಾ, ಅಂಗವಿಕಲರ ಸೇರಿದಂತೆ ಇನ್ನಿತರರಿಗೆ ನೀಡುವ ಮಾಶಾಸನವನ್ನು 3000ಕ್ಕೇರಿಸುವಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟಿಸಿ  ಉಪ ತಹಶಿಲ್ದಾರ್‍ಗೆ ಮನವಿಯನ್ನು ನೀಡಿದರು.ಈ ಸಂಧರ್ಭಧಲ್ಲಿ ಜಿಲ್ಲಾ ಕಾರ್ಯದರ್ಶಿ ಜಿ.ಸರೋಜ ಮಾತನಾಡಿ ಸಮಾಜಿಕ ಸೇವಾ ಭದ್ರತೆ ಯೋಜನೆಯಲ್ಲಿ ವಿಧವಾ ಮಹಿಳೆಯ, ಅಂಗವಿಕರ, ವೃಧ್ಧರ ಮಾಶಾಸನವನ್ನು 3000 ರೊಪಾಯಿಗಳ ವರೆಗೆ ಹೆಚ್ಚಿಸಬೇಕು ಹಾಗೂ ದಿನ ನಿತ್ಯದ ಬಳಕೆಯ ಅಗತ್ಯ ವಸ್ತಗಳ ಬೆಲೆ ಏರಿಕೆಗೆ ಬ್ರೇಕ್ ಹಾಕಬೇಕಿದೆ, ವಿಧವೆಯರು ಸಮಾಜದ ಸಮಾನತೆಗಾಗಿ, ಬಡ ಕುಟುಂಬಗಳ ನಿರ್ವಹಣೆಯು ಕಷ್ಟಕರ ಪರಿಸ್ಥಿತಿ ತಲುಪಿದ್ದು ಸರ್ಕಾರ ನೀಡುವ ರೂ.

600, 1000, 1400ಮಾಶಾಸನವು ತುಂಬಾ ಕಡಿಮೆಯಾಗಿದ್ದು ಕೂಡಲೇ ಇದನ್ನು ಹೆಚ್ಚಿಸುಚಂತೆ ಒತ್ತಾಯಿಸಿದರು.ಬೆಲೆ ಏರಿಕೆಗೆ ಬಿಜೆಪಿಯೇ ಪರಿಹಾರವೆಂದು ಅಧಿಕಾರದ ಚುಕ್ಕಾಣಿ ಹಿಡಿದ ಕೇಂದ್ರ ಹಾಗೂ ಸರ್ಕಾರಗಳು ಯಾವುದೇ ಕ್ರಮ ವಹಿಸದಿರುವುದು ಮತ್ತು ದಿನೇ ದಿನೇ ಪೆಟ್ರೋಲ್,ಡಿಸೆಲ್,ಅಡುಗೆ ಅನಿಲಗಳ ಬೆಲೆ ಗಗನಕ್ಕೇರುತ್ತಿವೆ ಹೊರತು ಕಡಿಮೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ, ಇಂತಹ ಪರಿಸ್ಥಿತಿಯು ಸಾಮಾನ್ಯರ ಜನ ಜೀವನ ದುಸ್ತರಗೊಳ್ಳುತ್ತಿದೆ,ಜನ ಸಾಮಾನ್ಯರ ಜೀವನ ಸುಸ್ಥಿರಗೊಳಿಸುವಲ್ಲಿ ಸರ್ಕಾರಗಳು ಅಗತ್ಯ ಕ್ರಮ ವಹಿಸಬೇಕೆದೆ ಎಂದರು.ಈ ಸಂಧರ್ಭದಲ್ಲಿ ಬೇಗಂ, ಜಲಜಾಕ್ಷಿ , ಫಾತಿಮಾ, ಕೆ.ಪಾಯಲ್ ಬಾನು, ಚನ್ನ ಬಸಮ್ಮ ಇನ್ನಿತರರಿದ್ದರು.

ಸುದ್ದಿ ಓದಿ