ಲೇಖನಗಳು

ಕ್ರಾಂತಿಕಾರಿ ಭಗತ್ಸಿಂಗ್

ಕ್ರಾಂತಿಕಾರಿ ಭಗತ್ಸಿಂಗ್

ವೀರ ಸ್ವಾತಂತ್ರ್ಯ ಹೋರಾಟಗಾರ ಅಪ್ರತಿಮ ದೇಶಪ್ರೇಮಿ, ವೀರಯೋಧ, ಕ್ರಾಂತಿಕಾರಿ ಭಗತ್ಸಿಂಗ್ ರವರನ್ನು ನಾವು ಎಂದೆಂದಿಗೂ ನಮ್ಮ ಹೃದಯದಲ್ಲಿಟ್ಟು ಪೂಜಿಸಿ, ಗೌರವಿಸಿ ಸ್ಮರಿಸುತ್ತೇವೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಭಾರತಾಂಬೆಗೆ ತನ್ನ ಪ್ರಾಣವನ್ನು ಅಪರ್ಿಸಿದ ಮಹಾನ್ ಕ್ರಾಂತಿಕಾರಿ ಭಗತ್ಸಿಂಗ್.

ಇಂದು ಕ್ರಾಂತಿಕಾರಿ ಭಗತ್ಸಿಂಗ್ ಜನ್ಮದಿನ. ಭಾರತದ ಸ್ವಾತಂತ್ರ್ಯಕ್ಕಾಗಿ ಉದಯವಾದಂತಹ ಕ್ರಾಂತಿ ಕಿಡಿ. ಪಂಜಾಬಿನ ಪುರುಷಸಿಂಹ ಅದು ಭಗತ್ಸಿಂಗ್. 28 ಸೆಪ್ಟೆಂಬರ್ 1907 ರಂದು ಪಂಜಾಬಿನ ಲಾಯಲ್ ಪುರ ಜಿಲ್ಲೆಯ ಬಂಗಾ ಎಂಬ ಗ್ರಾಮದಲ್ಲಿ ಜನಿಸುತ್ತಾರೆ. ತಂದೆ ಕಿಶನ್ ಸಿಂಗ್, ತಾಯಿ ವಿದ್ಯಾವತಿ. ಭಗತ್ಸಿಂಗ್ರ ಕುಟುಂಬವೇ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬವಾಗಿದೆ. ಕೇವಲ ಎಂಟು ವರ್ಷದವರಿದ್ದಾಗಲೇ ಗೋಧಿ ಬೆಳೆಯುವಂತೆ ಬಂದೂಕನ್ನು ಬೆಳೆಯಬೇಕೆಂದ ಕ್ರಾಂತಿಕಾರಿ, ತನ್ನ 12 ನೇ ವಯಸ್ಸಿನಲ್ಲಿಯೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಪ್ರಭಾವಿತರಾದ ಭಗತ್ಸಿಂಗ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಾರೆ. ಜಲಿಯನ್ ವಾಲಾಬಾಗ್ ಘಟನೆಯಲ್ಲಿ ಮಡಿದವರ ರಕ್ತವನ್ನು ತಂದು ಪೂಜಿಸುವ ವ್ಯಕ್ತಿತ್ವ ಹೊಂದಿದವನು. ತನ್ನ 23 ನೇ ವಯಸ್ಸಿಗೆ ಭಾರತಮಾತೆಗೆ ಪ್ರಾಣ ತ್ಯಾಗ ಮಾಡಿದವರು. 

ನಂತರದಲ್ಲಿ "ಅಸಹಕಾರ" ಚಳುವಳಿಯಲ್ಲಿ ಭಾಗವಹಿಸುತ್ತಾರೆ. ಭಾರತಕ್ಕೆ ಸೈಮನ್ ಆಯೋಗ ಭೇಟಿಕೊಟ್ಟಾಗ "ಸೈಮನ್ ಹಿಂದಿರುಗಿ" ಎಂಬ ಹೋರಾಟದಲ್ಲಿ ಲಾಲಾ ಲಜಪತರಾಯರು ಹುತಾತ್ಮರಾದರು. ಈ ಘಟನೆಯಲ್ಲಿ ಬ್ರಿಟಿಷ ಅಧಿಕಾರಿ "ಸ್ಕಾಟ್ ಪಾತ್ರವಿದ್ದದ್ದರಿಂದ "ಸ್ಕಾಟ್ನನ್ನು ಹತ್ಯೆ ಮಾಡುವ ಉದ್ದೇಶವಿತ್ತು. ಆದರೆ "ಸ್ಕಾಟ್ನ ಬದಲಾಗಿ "ಸ್ಯಾಂಡರ್ಸನ್ನನ್ನು ಹತ್ಯೆ ಮಾಡಿದರು. ಹೀಗೆ ತಮ್ಮ ಸ್ವಾತಂತ್ರ್ಯ ಚಟುವಟಿಕೆ ಪ್ರಾರಂಭಿಸಿದರು. ತಮ್ಮ ಮನೆಯಲ್ಲಿ ಮದುವೆ ಪ್ರಸ್ತಾವನೆಯನ್ನು ತಿರಸ್ಕರಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಹೀಗೆ ತಮ್ಮ ಸ್ವಾತಂತ್ರ್ಯ ಚಟುವಟಿಕೆಯನ್ನು ಪ್ರಾರಂಭಿಸಿದರು. "ನೌ ಜವಾನ್ ಭಾರತ ಸಭಾ" "ಹಿಂದೂಸ್ತಾನ್ ಸೋಶಿಯಾಲಿಸ್ಟಿಕ್ ರಿಪಬ್ಲಿಕ್ ಆಮರ್ಿ ಹೀಗೆ ಸಂಘಟನೆ ಒಗ್ಗೂಡಿಸಿದರು. ಇದರ ಮೂಲಕ ಹೋರಾಟವನ್ನು ಚುರುಕುಗೊಳಿಸಿದರು. ಭಗತ್ಸಿಂಗ್ ಒಬ್ಬ ಕ್ರಾಂತಿಕಾರಿ ಅಷ್ಟೇ ಅಲ್ಲದೇ ಅವರೊಬ್ಬ ಒಳ್ಳೆಯ ಓದುಗಾರರು ಆಗಿದ್ದರು. ಹಾಗೂ ಸತ್ಯಾಗ್ರಹಿಯೂ ಆಗಿದ್ದರು. ಭಗತ್ಸಿಂಗ್ರವರು ಒಳ್ಳೆಯ ಬರಹಗಾರರೂ ಆಗಿದ್ದರು. ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಹಾಗೂ ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ "ಘಥಿ  ಚಿಟ ಚಿಟಿ ಂಣಜಣ" ಕೃತಿ ಪ್ರಮುಖವಾಗಿದೆ. ತಮ್ಮ ಸಾವಿನ ಸಂದರ್ಭದಲ್ಲಿಯೂ 'ರೆವಲ್ಯೂಶನರಿ ಆಫ್ ಲೆನಿನ್  "ಖಜಟಟಿಛಿಜಟಿಛಿಜ ಠಜಿ ಐಜಟಿಟಿ' ಪುಸ್ತಕವನ್ನು ಓದಿದ ಪುಸ್ತಕ ಪ್ರೇಮಿ, ಕ್ರಾಂತಿಕಾರಿ ಭಗತ್ಸಿಂಗ್. ಭಗತ್ಸಿಂಗ್ ಹಾಗೂ ಸಹಚರರು ಸೇರಿ ಬ್ರಿಟಿಷರು ತರುತ್ತಿದ್ದ ಮಸೂದೆ ವಿರೋದಿಸಿ, ಅಧಿವೇಶನವನ್ನು ವಿರೋಧಿಸಿ ಅಸೆಂಬ್ಲಿಗೆ ಬಾಂಬ್ ಹಾಕಿ ಬಂಧನಕ್ಕೆ ಒಳಪಡುತ್ತಾರೆ. ನಂತರ ಜೈಲಿಗೆ ಕಳುಹಿಸಿದಾಗ ಅಲ್ಲಿಯ ಊಟ ಹಾಗೂ ಇತರ ಸೌಲಭ್ಯಗಳ ಕೊರತೆಯನ್ನು ಖಂಡಿಸಿ ಜೈಲಿನಲ್ಲಿಯೇ ಹಲವು ದಿನಗಳ ಕಾಲ ಭಗತ್ಸಿಂಗ್ ಹಾಗೂ ಸಹಚರರು ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು. ವಿವಿಧ ರೀತಿಯ ಹೋರಾಟಗಳು ಭಗತ್ಸಿಂಗ್ ಅವರದ್ದಾಗಿವೆ. ಆದ್ದರಿಂದ ಭಗತ್ಸಿಂಗ್ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದಾರೆ. ಉದಾತ್ತ ಚಿಂತನೆಗಳನ್ನು ಹೊಂದಿದ್ದಾರೆ. ನಂತರ ಸುಳ್ಳು ದಾವೆಗಳನ್ನು ಭಗತ್ಸಿಂಗ್, ರಾಜಗುರು, ಸುಖದೇವ್ರ ಮೇಲೆ ಹಾಕಲಾಗಿ ಈ ಮೂವರನ್ನು ಗಲ್ಲಿಗೇರಿಸಲು ನಿರ್ಧರಿಸುತ್ತಾರೆ. ಇದು ಒಂದು ವಿಶಿಷ್ಟ ಹಾಗೂ ಅನ್ಯಾಯದ ತೀಪರ್ು ಆಗಿರುತ್ತದೆ. ಮಾರ್ಚ 24 ಕ್ಕೆ ಇದ್ದ ಶಿಕ್ಷೆಯನ್ನು ಮಾರ್ಚ 23 ಕ್ಕೆ ಅನ್ಯಾಯವಾಗಿ ಜಾರಿಗೊಳಿಸಲಾಗುತ್ತದೆ. ಭಗತ್ಸಿಂಗ್ರ ಭೇಟಿಗಾಗಿ ಬಂದಿದ್ದ ಅವರ ತಾಯಿ ಹೇಳುವ ಮಾತು ಅಪ್ರತಿಮ ದೇಶಭಕ್ತಿಯನ್ನು ಸಾರುತ್ತದೆ. ಭಗತ್ಸಿಂಗ್ರ ತಾಯಿ ಹೇಳುತ್ತಾರೆ "ಎಲ್ಲರೂ ಸಹಜವಾಗಿ ಸುಮ್ಮನೇ ಸಾಯ್ತಾರೆ. ಆದರೆ ಭಾರತ ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಸಾಯೋದು ಇದೆಯಲ್ಲಾ ಅಂತಹ ಸಾವು ವೀರಮರಣ, ಈ ಹೆಮ್ಮೆ ನನಗಿದೆ. ನೇಣಿಗೆ ಹೋಗಬೇಕಾದರೆ ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆ ಕೂಗು. ನಿನ್ನ ಕೂಗಿನಿಂದ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಲಿ, ಸ್ವಾತಂತ್ರ್ಯ ಕಹಳೆ ಮೊಳಗಲಿ, ನಿನ್ನ ಸಾವು ಇತಿಹಾಸದ ಚರಿತ್ರೆಯಲ್ಲಿ ಅಮರವಾಗಲಿ" ಎನ್ನುತ್ತಾರೆ. ಆ ತಾಯಿಯ ಮಾತು ಅಪ್ರತಿಮ ದೇಶಭಕ್ತಿಯನ್ನು ಸಾರುತ್ತದೆ. ಭಗತ್ಸಿಂಗ್ರವರ ಪ್ರಕಾರ ಕ್ರಾಂತಿ ಎಂದರೆ - ಕ್ರಾಂತಿ ಎನ್ನುವುದು ಬಂದೂಕಿನ ನಳಿಕೆಯಲ್ಲಿಲ್ಲ. ಕ್ರಾಂತಿ ಎನ್ನುವುದು ಕತ್ತಿ ತುದಿಯಲ್ಲಿಲ್ಲ, ಕ್ರಾಂತಿ ಎನ್ನುವುದು ಸಂಪತ್ತನ್ನು ದೋಚುವುದಲ್ಲ, ಕ್ರಾಂತಿ ಎನ್ನುವುದು ರೈಲಿನ ಹಳಿ ಕೀಳುವುದರಲ್ಲಿಲ್ಲ, ಹಿಂಸೆಯಲ್ಲಿಲ್ಲ.

ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ಎಂಬುದಾಗಿದೆ. ವ್ಯಕ್ತಿಗಳನ್ನು ಕೊಲ್ಲಬಹುದು ಆದರೆ ಅವರ ವಿಚಾರಗಳನ್ನಲ್ಲ ಎಂಬುದು ಹಾಗೂ ಬದುಕಿನ ಭಾರ ನಾವೇ ಹೊರಬೇಕು. ಉಳಿದವರ ಹೆಗಲು ಶವಯಾತ್ರೆಗಷ್ಟೇ ಸೀಮಿತ. ಕೊನೆಯದಾಗಿ ಹೇಳ್ತಾರೆ ನಾನು ನೇಣಿಗೇರಿದ ನಂತರ ಮತ್ತೇ ಹುಟ್ಟಿ ಬರಬೇಕು. ನನ್ನ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಬೇಕು ಎಂಬುದಾಗಿತ್ತು. ಮಾರ್ಚ 23, 1931 ರಂದು ಭಗತ್ಸಿಂಗ್, ರಾಜಗುರು, ಸುಖದೇವ್ ರವರನ್ನು ಗಲ್ಲಿಗೇರಿಸಲಾಯಿತು. ಮೂರು ಸಿಂಹಗಳು ಮರೆಯಾಗುತ್ತವೆ. ಇಂದಿನ ದಿನ  ಭಗತ್ಸಿಂಗ್ ಜನ್ಮದಿನವಾಗಿದ್ದು, ಈ ಮೂವರು ಕ್ರಾಂತಿಕಾರಿಗಳನ್ನು ಹಾಗೂ ಅವರು ನಮಗೆ ನೀಡಿದ ಕೊಡುಗೆಯನ್ನು ನೆನೆಯೋಣ ಭಗತಸಿಂಗ್, ರಾಜಗುರು, ಸುಖದೇವ ಅವರ ಅಪ್ರತಿಮ ದೇಶಭಕ್ತಿಯನ್ನು ಅವರ ವಿಚಾರಗಳನ್ನು ನಾವು ಅನುಸರಿಸಿ ಭಾರತ ದೇಶಕ್ಕಾಗಿ ಭಾರತದ ದೇಶದ ಅಭಿವೃದ್ಧಿಗಾಗಿ, ಏಳ್ಗೆಗಾಗಿ ಶ್ರಮಿಸೋಣ ಭಾರತ ಮಾತಾಕಿ ಜೈ.

- ಮೃತ್ಯುಂಜಯ ಕುಲಕಣರ್ಿ 

ಮೊ. 901905799 

ಸುದ್ದಿ ಓದಿ