ನಿವೃತ್ತ ಶಿಕ್ಷಕ ಸಿ.ಟಿ. ಮಳೇಕರ ನಿಧನ
ಮುಂಡಗೋಡ14: ಪಟ್ಟಣದ ಗಾಂಧಿನಗರ ನಿವಾಸಿ ನಿವೃತ್ತ ಶಿಕ್ಷಕ ಸಿ.ಟಿ. ಮಳೇಕರ(ಕಲಾಲ)(76) ವಯೋಸಹಜ ಕಾಯಿಲೆಯಿಂದ ಮಂಗಳವಾರ ನಿಧನರಾಗಿದ್ದಾರೆ. ಮೃತರು ಪತ್ನಿ, 2 ಗಂಡು, 2 ಹೆಣ್ಣು ಮಕ್ಕಳನ್ನು ಅಪಾರ ಬಂಧು ಬಳಗ ಅಗಲಿದ್ದಾರೆ. ಕಾಯಕವೇ ಕೈಲಾಸದಲ್ಲಿ ನಂಬಿಕೆ ಇಟ್ಟಿದ್ದ ಇವರು ನಿವೃತ್ತಿ ಹೊಂದಿದ ನಂತರ ಅಂಚೆ ಕಛೇರಿಯಲ್ಲಿ ಏಜಂಟರಾಗಿ ಸಾರ್ವಜನಿಕರಿಂದ ಕೆ.ವಿ.ಪಿ, ಟಿ.ಡಿ, ಎನ್ಎಸ್.ಸಿ, ಆರ್.ಡಿ ಮಾಡಿಸುತ್ತಿದ್ದರು. ಮೃತರ ನಿಧನಕ್ಕೆ ಅಂಚೆ ಕಛೇರಿಯಲ್ಲಿ ಸಿಬ್ಬಂದಿಗಳು ಹಾಗೂ ಶಿಕ್ಷಕ ವರ್ಗ ಸಂತಾಪ ವ್ಯಕ್ತಪಡಿಸಿದೆ