ನಿವೃತ್ತ ನೌಕರರು ಸನ್ಮಾನಕ್ಕೆ ಅರ್ಹರಾಗುತ್ತಾರೆ: ಗಲಗಲಿ
ಲೋಕದರ್ಶನ ವರದಿ,
ಜಮಖಂಡಿ: 13: ಸರಕಾರದ ಸೇವೆ ಸಹಿತ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೇ ಮಾತ್ರ ನಿವೃತ್ತ ನೌಕರರು ಸನ್ಮಾನಕ್ಕೆ ಅರ್ಹರಾಗುತ್ತಾರೆ ಎಂದು ಆರೋಗ್ಯ ಇಲಾಖೆ ತಾಲೂಕ ವೈದ್ಯಾಧಿಕಾರಿ ಡಾ.ಜಿ.ಎಸ್. ಗಲಗಲಿ ಹೇಳಿದರು.
ನಗರದ ಕುಂಚನೂರ ರಸ್ತೆಯಲ್ಲಿರುವ ದಾನಮ್ಮಾದೇವಿ ಸಮುದಾಯ ಭವನದಲ್ಲಿ ಆರೋಗ್ಯ ಇಲಾಖೆ ಹಿರಿಯ ಮೇಲ್ವಿಚಾರಕ ಎಂ.ಎಚ್.ಕಡ್ಲಿಮಟ್ಟಿ ಸೇವಾ ನಿವೃತ್ತಿ ಸಮಾರಂಭದಲ್ಲಿ ಮಾತನಾಡಿದರು.
ಉತ್ತಮ ನಡತೆ, ಪಾರದರ್ಶಕ ಸೇವೆಯಲ್ಲಿ ಗುರತಿಸಿಕೊಂಡಿರುವ ಹಿರಿಯ ಮೇಲ್ವಿಚಾರಕ ಎಂ.ಎಚ್.ಕಡ್ಲಿಮಟ್ಟಿ ಅವರು ಕಳೆದ 38 ವರ್ಷದಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಕಿರಿಯ ಸಹಾಯಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೊರೊನಾ ಸಂದರ್ಭದಲ್ಲಿ ದಿನದ 18 ಗಂಟೆ ಸೇವೆ ಸಲ್ಲಿಸಿದ್ದಾರೆ. ಅವಿರತ ಸೇವೆ ಗಮನಿಸಿದ ತಾಲೂಕಾ ಆಡಳಿತ ಕಳೆದ ಅಗಷ್ಟದಲ್ಲಿ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.
ಮುತ್ತಿನಕಂತಿ ಮಠದ ಶ್ರೀಗಳು ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಡಾ. ನರಸಿಂಹ, ಡಾ.ನರಸಗೊಂಡ, ಡಾ.ಜೋಷಿ ಸೇರಿದಂತೆ ಅನೇಕರು ಇದ್ದರು.