ಬಳ್ಳಾರಿ

ರಿಟೇಲ್ ಹಬ್ಬ: 3.47 ಕೋಟಿ ಸಾಲ ಮಂಜೂರಾತಿ ಪತ್ರ ವಿತರಣೆ

ರಿಟೇಲ್ ಹಬ್ಬ: 3.47 ಕೋಟಿ ಸಾಲ ಮಂಜೂರಾತಿ ಪತ್ರ ವಿತರಣೆ

ಲೋಕದರ್ಶನ ವರದಿ 

ಬಳ್ಳಾರಿ 19: ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಖ್ಯ ಕಛೇರಿ  ಬಳ್ಳಾರಿ  ವತಿಯಿಂದ ದಿ. 31ರಂದು ರಿಟೈಲ್ ಹಬ್ಬ "ಆಚರಿಸಲು ಕರೆ ಕೊಟ್ಟಿದ್ದು ಅದರ ಅಂಗವಾಗಿ ದಿ.  18ರ  ಗುರುವಾರ ಬಳ್ಳಾರಿ ಕರ್ನಾಟಕ  ಗ್ರಾಮೀಣ  ಬ್ಯಾಂಕ್  ಗಾಂಧಿನಗರ  ಶಾಖೆ ವತಿಯಿಂದ  "ರಿಟೇಲ್ ಹಬ್ಬ "ಆಚರಿಸಲಾಯ್ತು.  


ಪ್ರಾದೇಶಿಕ ಪ್ರಬಂಧಕರಾದ -ರಮಾನಾಥ ಆಚಾರ್ಯ ಅಧ್ಯಕ್ಷತೆ ವಹಿಸಿ  ಗಾಂಧಿನಗರ  ಶಾಖೆಯ ಸುಮಾರು 12ಗ್ರಾಹಕರಿಗೆ ಸರಿಸುಮಾರು  3.47 ಕೋಟಿ ಮೊತ್ತದ ಸಾಲ ಮಂಜೂರಾತಿ ಪತ್ರಗಳನ್ನ ವಿತರಿಸಿ, ಇನ್ನು ಹೆಚ್ಚಿನ ಗ್ರಾಹಕ ಬಂಧುಗಳು  ಈ  ರಿಟೈಲ್  ಹಬ್ಬದಲ್ಲಿ ಬಡ್ಡಿ ದರದಲ್ಲಿ ವಿಶೇಷ ರಿಯಾಯ್ತಿ ಸಿಗುವ  ವಾಹನ ಸಾಲ, ಗೃಹ ನಿರ್ಮಾಣ ಸಾಲ ಹಾಗೂ ಆಸ್ತಿ ಅಡಮಾನ ಸಾಲದ  ಸದುಪಯೋಗ  ಪಡೆಯಬೇಕೆಂದು ಕೋರಿದರು, ಈ ಹಬ್ಬ ದಿ. 31ರಂದು ಕೊನೆಗೊಳ್ಳಲಿದ್ದು  ಜಿಲ್ಲೆಯ ಸಮಸ್ತ  ಬ್ಯಾಂಕ್ ಗ್ರಾಹಕರು ಸಹಕರಿಸಿ, ಯಶಸ್ವಿಗೊಳಿಸಬೇಕೆಂದು, ಹಾಗೆ ಬ್ಯಾಂಕಿನ ಇನ್ನಿತರ ಸೇವೆಗಳ ಉಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.  

ಶಾಖೆಯ ಮುಖ್ಯ ಪ್ರಬಂಧಕ ಮಾಬುಸುಬಾನಿ ಪಾಲಾತೂರ್  ಹಾಗು ಪ್ರಾದೇಶಿಕ  ಕಛೇರಿಯ ಪದ್ಮನಾಭ ಹಾಗು ಸಿಬ್ಬಂದಿ  ಹಾಜರಿದ್ದರು. 


ಸುದ್ದಿ ಓದಿ