ಚಿಕ್ಕೋಡಿ

ಕೆನರಾ ಬ್ಯಾಂಕ ರಿಟೇಲ್ ಅಸೆಟ್ಸನಿಂದ ರಿಟೇಲ ಉತ್ಸವ

ಕೆನರಾ ಬ್ಯಾಂಕ  ರಿಟೇಲ್ ಅಸೆಟ್ಸನಿಂದ ರಿಟೇಲ ಉತ್ಸವ
ಕೆನರಾ ಬ್ಯಾಂಕ ರಿಟೇಲ್ ಅಸೆಟ್ಸ ಶಾಖೆಯ ಆವರಣದಲ್ಲಿ ಏರ್ಪಡಿಸಲಾದ ಬೃಹತ್ ರಿಟೇಲ ಉತ್ಸವದ ಸಮಾರಂಭದಲ್ಲಿ ಪುರಸಭೆಯ ಮಾಜಿ ಅ

ಚಿಕ್ಕೋಡಿ10: ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ, ಗ್ರಾಹಕ ಸ್ನೇಹಿ ಯೋಜನೆಗಳನ್ನು ಶೀಘ್ರವಾಗಿ ತಲುಪಿಸುವ ಕೆಲಸವನ್ನು, ಕೆನರಾ ಬ್ಯಾಂಕ, ರಿಟೇಲ ಅಸೆಟ್ಸ ಚಿಕ್ಕೋಡಿ ಶಾಖೆಯು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ಚಿಕ್ಕೋಡಿ ಪುರಸಭೆಯ ಮಾಜಿ ಅಧ್ಯಕ್ಷ ಜಗದೀಶ ಕವಟಗಿಮಠ ಹೇಳಿದರು.

ನಗರದ ಕೆನರಾ ಬ್ಯಾಂಕ  ರಿಟೇಲ್ ಅಸೆಟ್ಸ ಶಾಖೆಯ ಆವರಣದಲ್ಲಿ ಏರ್ಪಡಿಸಲಾದ ಬೃಹತ್ ರಿಟೇಲ ಉತ್ಸವದ ಸಮಾರಂಭ ಜರುಗಿತು.

ಗ್ರಾಹಕರು ಬ್ಯಾಂಕಿನ ಜೊತೆಗೆ ಯಾವತ್ತೂ ಉತ್ತಮ ಸಂಬಂಧವನ್ನೂ ಹೊಂದಿದಲ್ಲಿ ಯಾರೇ ಬ್ಯಾಂಕಿನ ಅಧಿಕಾರಿಗಳು ಬಂದರೂ ಒಳ್ಳೆಯ ಸೇವೆ ಸಿಗುವ ಅವಕಾಶವಿರುತ್ತದೆ ಎಂದರು.

ಸಾರ್ವಜನಿಕರು ತಮ್ಮ ಬ್ಯಾಂಕಿನ ವ್ಯವಹಾರಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿಕೊಂಡು ಹೋಗುವುದು ಅವಶ್ಯಕವಿರುತ್ತದೆ. ಕೊರೊನಾ ಲಸಿಕೆಯ ಮಹತ್ವ ಮತ್ತು ಎಲ್ಲರೂ ಈ ಲಸಿಕೆಯನ್ನು ಪಡೆಯಬೇಕು ಎಂದರು.

ಕ್ಷೇತ್ರೀಯ ಕಾರ್ಯಾಲಯದ ಮಂಡಳ ಪ್ರಬಂಧಕ ಬಸಪ್ಪ ಇಟ್ನಾಳ ಅವರು ಬ್ಯಾಂಕು ಗ್ರಾಹಕರ ಮನೆ ಬಾಗಿಲಿಗೆ ಸೇವೆಯನ್ನು ನೀಡಲು ಬದ್ದವಾಗಿದೆ, ಸಾರ್ವಜನಿಕರು ಸೇವೆ ನೀಡುವ ಅವಕಾಶ ಕೊಡಬೇಕೆಂದು ಹೇಳಿದರು. 

ರಿಟೇಲ ಅಸೆಟ್ಸ ಶಾಖೆಯ ಮುಖ್ಯಸ್ಥ ಮಂಡಳ ಪ್ರಬಂಧಕ ಬಲವಂತ ಕುಲಕರ್ಣಿಯವರು ಮಾತನಾಡುತ್ತ, ಮನೆ ಸಾಲ, ಶಿಕ್ಷಣ ಸಾಲ, ವಾಹನ ಸಾಲ ಮತ್ತು ಪ್ರಧಾನ ಮಂತ್ರಿ ಆವಾಸ ಯೋಜನೆಯ ವಿವರ ನೀಡಿದರು ಮತ್ತು ರಿಟೇಲ್ ಉತ್ಸವದ ಅಂಗವಾಗಿ ಒಟ್ಟು 30 ಗ್ರಾಹಕರಿಗೆ ರೂ.5 ಕೋಟಿಯಷ್ಟು ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು. 

ವಾಹನ ಡೀಲರ ಮಾಣಿಕಭಾಗ ಮೋಟರ‍್ಸ, ನಾಗಶಾಂತಿ ಸಂಸ್ಥೆಗಳ ಮಾಲೀಕರು ವಿವಿಧ ವಾಹನಗಳ ಪ್ರದರ್ಶನ ಏರ್ಪಡಿಸಿದ್ದರು.

ಸಮಾರಂಭದಲ್ಲಿ ಗ್ರಾಹಕರಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಬ್ಯಾಂಕಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸಾರ್ವಜನಿಕರಿಗೆ ಬ್ಯಾಂಕಿನ ವಿವಿಧ ಯೋಜನೆಗಳ ಮಾಹಿತಿ ನೀಡಿದರು. 

ಸುದ್ದಿ ಓದಿ