ಬಳ್ಳಾರಿ

ಕಾರ್ಮಿಕ ಅದಾಲತ್ ಮೂಲಕ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ: ನ್ಯಾ.ಪುಷ್ಪಾಂಜಲಿದೇವಿ

ಕಾರ್ಮಿಕ ಅದಾಲತ್ ಮೂಲಕ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ: ನ್ಯಾ.ಪುಷ್ಪಾಂಜಲಿದೇವಿ

ಬಳ್ಳಾರಿ 11: ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಹಾಗೂ ಪರಿಹಾರ ಒದಗಿಸಲು ಜು.15ರಿಂದ ಆಗಸ್ಟ್‌ 15ರವರೆಗೆ ನಡೆಸಲಿರುವ ಕಾರ್ಮಿಕ ಅದಾಲತ್ 2.0 ಪ್ರಚಾರ ವಾಹನಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್‌.ಎಚ್‌.ಪುಷ್ಪಾಂಜಲಿ ದೇವಿ,ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸತೀಶ ಜೆ.ಬಾಳಿ ಅವರು ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್‌.ಎಚ್‌.ಪುಷ್ಪಾಂಜಲಿ ದೇವಿ ಅವರು ಸರಕಾರವು ಕಾರ್ಮಿಕರಿಗೆ ಹಲವಾರು ಸೌಲಭ್ಯಗಳು ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

ಕಾರ್ಮಿಕ ಅದಾಲತ್ ಕುರಿತು ಹೆಚ್ಚಿನ ಪ್ರಚಾರ ನೀಡುವುದರ ಮೂಲಕ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಎಂದರು. 

ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಕಮಲ ಷಾ ಅಲ್ತಾಫ್ ಅಹ್ಮದ್ ಇಬ್ರಾಹಿಂ ಹಾಗೂ ಮಾರಿಕಾಂಬ ಹುಲಿಕೋಟಿ ಅವರು ಮಾತನಾಡಿ, ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಹಾಗೂ ಪರಿಹಾರ ಒದಗಿಸಲು ಕಾರ್ಮಿಕ ಇಲಾಖೆಯ ಅಧಿನದಲ್ಲಿ ಬರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಮಾಜಿಕ ಭದ್ರತಾ ಮಂಡಳಿ ಹಾಗೂ ಇಲಾಖೆಯಲ್ಲಿ ಬಾಕಿ ಉಳಿದ ಅರ್ಜಿಗಳು/ಪ್ರಕರಣಗಳನ್ನು ವಿಲೇವಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ಇದೇ ಜು.15ರಿಂದ ಆಗಸ್ಟ್‌ 15ರವರೆಗೆ ಒಂದು ತಿಂಗಳ ಕಾಲ ಕಾರ್ಮಿಕ ಅದಾಲತ್‌-2.0 ನಡೆಸಲಾಗುತ್ತಿದೆ ಎಂದರು. 

ಬಳ್ಳಾರಿ ಜಿಲ್ಲೆಯ ಕಾರ್ಮಿಕರು ಯಾವುದಾದರು ಸಮಸ್ಯೆ, ಬಾಕಿ ಅರ್ಜಿ, ವಿವಾದಗಳು ಇತ್ಯರ್ಥವಾಗದೇ ಇದ್ದಲ್ಲಿ ಕಾರ್ಮಿಕ ಅದಾಲತ್ ಮೂಲಕ ಜಿಲ್ಲಾ ಕಾರ್ಮಿಕ ಅಧಿಕಾರಿಯವರ ಕಛೇರಿ ಉಪ ವಿಭಾಗ-1್ಘ2 ಬಳ್ಳಾರಿ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕ ಕಾರ್ಮಿಕ ನೀರೀಕ್ಷಕರ ಕಛೇರಿಗಳಲ್ಲಿ ಪ್ರತಿ ದಿನ ಬೆಳ್ಳಿಗ್ಗೆ 10:30 ರಿಂದ ಸಂಜೆ 4:30 ರ ಅವಧಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅರ್ಜಿಗಳನ್ನು ನಿಯಮನುಸಾರ ಪರೀಶೀಲಿಸಿ ಶಿಘ್ರವಾಗಿ ಇತ್ಯರ್ಥಗೊಳಿಸಲಾಗುವುದೆಂದು ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಮೌನೇಶ, ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕರಾದ ಎನ್‌.ನಾಗರಾಜ ಪೂಜಾರಿ, ತುರುಮಂದೆಪ್ಪ, ಸಿಬ್ಬಂದಿಗಳಾದ ರಮೇಶ,ಅಮರ​‍್ಪ, ವಿಷ್ಣುಕುಮಾರ,ಬಿ.ಎಂ.ಕೋಟ್ರೇಶ,ಬಸವರಾಜ ಸೇರಿದಂತೆ ಇನ್ನೀತರರು ಇದ್ದರು. 


ಸುದ್ದಿ ಓದಿ