ವಿಜಯಪುರ

ಕಾನೂನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ : ಬಾಬು ಡಿ. ಪವಾರ್‌

ಕಾನೂನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ : ಬಾಬು ಡಿ. ಪವಾರ್‌

ವಿಜಯಪುರ 09: ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯ ಕಾರ್ಯದರ್ಶಿ ಬಾಬು ಡಿ. ಪವಾರ್ ಹೇಳಿದರು. ಅವರು ಹೋರ್ತಿ ಪೋಲಿಸ್ ಠಾಣೆಗೆ ಪಿಎಸ್ ಐ ಆಗಿ ಆಗಮಿಸಿದ ಶ್ರೀಮತಿ ಅನಿತಾ ರಾಥೋಡ್ ಇವರನ್ನು ಸ್ವಾಗತಿಸಿ ಹೃದಯ ಸ್ಪರ್ಶಿ ಸನ್ಮಾನ ಮಾಡಲಾಯಿತು. ನಾವೆಲ್ಲರೂ ಇಂದು ನೆಮ್ಮದಿಯಿಂದ ಜೀವನ ಸಾಗಿಸಬೇಕಾದರೆ ಪೊಲೀಸ ಇಲಾಖೆ  ಸೇವೆ ಅಮೂಲ್ಯವಾಗಿದೆ. ತಮ್ಮ ಮನೆ ಮಠವನ್ನು ಜನರ ಸೇವೆಗಾಗಿ ಹಗಲು ರಾತ್ರಿ ಎನ್ನದೇ ಶ್ರಮಿಸುವ ಕಾಯಕ ದೊಡ್ಡದಾಗಿದೆ.

ಇಂದು ನಮ್ಮ ಸಮಾಜದವರಾದ ಶ್ರೀಮತಿ ಅನಿತಾ ರಾಥೋಡ ಮೇಡಂ ಹೋರ್ತಿ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಬಂದಿರುವುದು. ನಮ್ಮ ರಾಜನಾಳ ತಾಂಡ ಹಾಗೂ ಹೊರ್ತಿ ಊರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪುರು ಸೋಮಲು ಪವಾರ್, ಭೀಮಸಿಂಗ್ ಪುನ್ನು ನಾಯಿಕ್, ಗಣಪತಿ ಗಂಗು ಪವಾರ್, ರತನಸಿಂಗ್ ಕಸನು ಪವಾರ್, ಹಿರು ಖೇಮು ರಾಠೋಡ, ರಾಮು ಕಸನು ಪವಾರ್, ಪ್ರವೀಣ ಲಕ್ಷ್ಮಣ ಪವಾರ, ಹೀರು ಚಂದು ರಾಠೋಡ,  ಕುಮಾರ ಖೇಮು ಪವಾರ್ ಮುಂತಾದವರು ಇದ್ದರು. 


ಸುದ್ದಿ ಓದಿ