ಜೀವನ ರೂಪಿಸುವ ಪಾಲಕರನ್ನು ಗೌರವಿಸಿ: ನ್ಯಾ. ಭಾಗ್ಯಲಕ್ಷ್ಮೀ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 15: ಜೀವನ ರೂಪಿಸುವಲ್ಲಿ ಪಾಲಕರ ಪಾತ್ರ ಹಿರಿಯದಾಗಿದೆ, ಅವರ ಪ್ರತಿಯೊಂದು ಹೆಜ್ಜೆ ಅನುಕರಣೀಯವಾಗಿದ್ದು ಹಿರಿಯ ನಾಗರೀಕರಿಗೆ ಗೌರವಯುತವಾಗಿ ಕಾಣಿ ಎಂದು ಗೌರವಾನ್ವಿತ ಸಿವಿಲ್ ನ್ಯಾಯಾಧೀಶರಾದ ಭಾಗ್ಯಲಕ್ಷ್ಮೀ ಅವರು ಹೇಳಿದರು.
ಪಟ್ಟಣದ ಸರ್ಕಾರಿ ನಿವೃತ್ತ ನೌಕರರ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ನಿವೃತ್ತ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಹಿರಿಯ ನಾಗರೀಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೃಧ್ಧಾಪ್ಯ ಎಂಬುದು ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ, ಅದಕ್ಕೆ ಹೊಂದಿಕೊಂಡು ಜೀವನ ಸಾಗಿಸಬೇಕಿದೆ, ಕುಟುಂಬದಲ್ಲಿ ಮಕ್ಕಳನ್ನು ಲಾಲನೆ ಪಾಲನೆ ಮಾಡಿ ಯವ್ವಾನಾವಸ್ಥೆಗೆ ತರುವುದರಲ್ಲಿ ತಂದೆ ತಾಯಿಯ ಪಾತ್ರ ಮಹತ್ತರವಾಗಿರುತ್ತದೆ , ಹಾಗೆಯೇ ಮಕ್ಕಳು ದೊಡ್ಡವರಾಗಿ ನಮಗೆ ಆಸರೆಯಾಗುತ್ತಾರೆ ಎಂಬೆ ಎಂಬ ಹಂಬಲ ಪ್ರತಿಯೊಬ್ಬರಲ್ಲೂ ಇರುತ್ತದೆ ಹಾಗಾಗಿ ಮಕ್ಕಳು ತಮ್ಮ ಪೋಷಕರಿಗೆ ಐಷಾರಾಮಿ ಜೀವನ ನೀಡದಿದ್ದರೂ, ಇರುವುದರಲ್ಲೇ ಪ್ರೀತಿಯಿಂದ ಗೌರವಯುತವಾಗಿ ಕಾಣವಂತೆ ತಿಳಿಸಿದರು. ತಮ್ಮ ತಂದೆಯ ಅಗಲೀಕೆಯನ್ನು ವ್ಯೆಕ್ತಪಡಿಸಿ ಭಾವುಕರಾದ ಘಟನೆಯು ಜರುಗಿತು, ತಂದೆ ತಾಯಿ ಇರುವತನಕ ಅವರ ಬೆಲೆ ತಿಳಿಯುವುದಿಲ್ಲ ಹಾಗಾಗಿ ಕಳೆದುಕೊಂಡ ಮೇಲೆ ಪಶ್ಚಾತಾಪ ಪಟ್ಟು ಪ್ರಯೋಜನವಿಲ್ಲ, ಕಳೆದುಕೊಳ್ಳುವುದರ ಮೊದಲೇ ಅವರಿಗೆ ಪ್ರೀತಿ ವಾತ್ಸಲ್ಯದಿಂದ ಕಾಣಿ ಎಂದು ಕರೆ ನೀಡಿದರು.
ಈ ಸಂಧರ್ಭಧಲ್ಲಿ ಅಧ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮುದ್ದಪ್ಪ ವಹಿಸಿದ್ದರು,ವಕೀಲರ ಸಂಘದ ಅಧ್ಯಕ್ಷ ಬಸಪ್ಪ, ಸಹ ಕಾರ್ಯದರ್ಶಿ ಸುಭಾಶ್ ನಾಯ್ಕ್, ಸಹಾಯಕ ಸರಕಾರಿ ಅಭಿಯೋಜಕ ರಾಘವೇಂದ್ರ ತಳವಾರ, ಹಿರಿಯ ವಕೀಲರಾದ ವಿಷಾಲಾಕ್ಷಿ, ಗಂಗಾಧರ ಸೇರಿದಂತೆ ನಿವೃತ್ತ ನೌಕರರು , ವಕೀಲರು ಇದ್ದರು.