ಜಮಖಂಡಿ

ವಿದ್ಯಾರ್ಥಿಗಳಿಗೆ ಸನ್ಮಾನ

ವಿದ್ಯಾರ್ಥಿಗಳಿಗೆ ಸನ್ಮಾನ

ಲೋಕದರ್ಶನ ವರದಿ,

ಜಮಖಂಡಿ: 24: ತಾಲೂಕಿನ ಸಿದ್ದಾಪೂರದ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪುಷ್ಪಾತಾಯಿಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದ 2ನೇ ಸಂಕಲನಾತ್ಮ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯಿತು.

ಶೇ.95ಕ್ಕಿಂತ ಹೆಚ್ಚು ಪ್ರತಿಶತ ಅಂಕ ಪಡೆದ 10 ವಿದ್ಯಾರ್ಥಿಗಳಿಗೆ ಗೊಲ್ಡ್ಸ್ಟಾರ್, ಶೇ.90 ರಿಂದ 94 ಪ್ರತಿಶತ ಅಂಕ ಪಡೆದ 21 ವಿದ್ಯಾರ್ಥಿಗಳಿಗೆ ಗ್ರೀನಸ್ಟಾರ್ ಹಾಗೂ ಶೇ.85 ರಿಂದ 89 ಪ್ರತಿಶತ ಅಂಕಗಳನ್ನು ಪಡೆದ 28 ವಿದ್ಯಾರ್ಥಿಗಳಿಗೆ ಬ್ಲ್ಯೂಸ್ಟಾರ್ ಪ್ರಮಾಣಪತ್ರ ನೀಡುವ ಮೂಲಕ ಅಂದಾಜು 59 ವಿದ್ಯಾರ್ಥಿಗಳು ಸ್ಟಾರ್ ಶ್ರೇಣಿಗಳನ್ನು ಪಡೆದುಕೊಂಡರು.

ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಶಾಸಕ ಜಗದೀಶ ಗುಡಗುಂಟಿ ಮಾತನಾಡಿದರು. ವೇದಿಕೆಯಲ್ಲಿ  ಕಾರ್ಯದರ್ಶಿ ಧರ್ಮಲಿಂಗಯ್ಯ ಗುಡಗುಂಟಿ, ಆಡಳಿತಾಧಿಕಾರಿ ಪ್ರೊ..ವೈ.ಬಿ.ಹೊಟ್ಟಿ, ನಿರ್ದೇಶಕ ಡಾ.ಎಸ್. ಎಸ್.ಹೂಲಿ, ಮುಖ್ಯಶಿಕ್ಷಕ ಕೆ.ವೈ.ಭೂತಾಳಿ, ಶಿಕ್ಷಕರಾದ ಎಸ್.ಎಂ.ಹಿಡಕಲ್, ಎಸ್.ವ್ಹಿ.ಮರನೂರ ಅನೇಕರು ಇದ್ದರು.


ಸುದ್ದಿ ಓದಿ