ಬಳ್ಳಾರಿ

ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ

ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ

ಲೋಕದರ್ಶನ ವರದಿ 

ಬಳ್ಳಾರಿ 27:   ಎಐಡಿಎಸ್‌ಓ ವತಿಯಿಂದ ಕಾರೇಕಲ್ಲು ಹಾಗೂ ಅಲ್ಲಿಪುರ ಗ್ರಾಮದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಕೆ.ಎಸ್‌.ಆರ್‌.ಟಿ.ಸಿ ನ ಡಿ.ಟಿ.ಓ ಚಂದ್ರಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. 

   

ಬಳ್ಳಾರಿ ತಾಲೂಕಿನ ಕಾರೇಕಲ್ಲು ಹಾಗೂ ಅಲ್ಲಿಪುರ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಬಳ್ಳಾರಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಬಸ್ ವ್ಯವಸ್ಥೆ ಸರಿಯಾದ ಸಮಯಕ್ಕೆ ಇಲ್ಲದ ಕಾರಣ ಪ್ರತಿ ನಿತ್ಯ ಶಾಲಾ-ಕಾಲೇಜುಗಳಿಗೆ ತೆರಳಲು ಹರಸಾಹಸ ಪಡಬೇಕಾಗಿದೆ. ಹಾಗೂ ಪ್ರತಿದಿನ ಎರಡು ಮೂರು ತರಗತಿಗಳಿಗೆ ಹಾಜರಾಗಲು ತೊಂದರಯಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳ ಶಿಕ್ಷಣದ ಹಿತಾದೃಷ್ಟಿಯಿಂದ ಕಾರೇಕಲ್ಲು ಗ್ರಾಮದಿಂದ ಬಳ್ಳಾರಿಗೆ ಬೆಳಿಗ್ಗೆ 7.30ಕ್ಕೆ ಹಾಗೂ ಮದ್ಯಾಹ್ನ 1ಗಂಟೆಗೆ ಬಳ್ಳಾರಿಯಿಂದ ಕಾರೇಕಲ್ಲುಗೆ ಮತ್ತು ಅಲ್ಲಿಪುರದಿಂದ ಬಳ್ಳಾರಿಗೆ ಬೆಳಿಗ್ಗೆ 8ಗಂಟೆಗೆ ಹಾಗೂ ಬಳ್ಳಾರಿಯಿಂದ ಅಲ್ಲಿಪುರಕ್ಕೆ ಮದ್ಯಾಹ್ನ 2ಗಂಟೆಗೆ ಗ್ರಾಮಗಳಿಗೆ ಸಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಎಐಡಿಎಸ್‌ಓ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯರಾದ ಕೆ.ಈರಣ್ಣ ಮನವಿ ಮಾಡಿಕೊಂಡರು. 


ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯೆರಾದ ನಿಹಾರಿಕ, ಮತ್ತು ವಿದ್ಯಾರ್ಥಿಗಳಾದ ದೇವರಾಜ್, ಜಿತೇಂದ್ರ, ಸಂತೋಷ್, ಶಂಕರ್, ಉದಯ್ ಇನ್ನಿತರರು ಭಾಗವಹಿಸಿದ್ದರು. 


ಸುದ್ದಿ ಓದಿ