ಬಳ್ಳಾರಿ

ಕಣೇಕಲ್ ಬಸ್ ಸ್ಟ್ಯಾಂಡ್ ಸ್ಥಳಾಂತರಗೊಳಿಸುವಂತೆ ಮನವಿ

ಕಣೇಕಲ್ ಬಸ್ ಸ್ಟ್ಯಾಂಡ್ ಸ್ಥಳಾಂತರಗೊಳಿಸುವಂತೆ ಮನವಿ

ಬಳ್ಳಾರಿ 01: ನಗರದಲ್ಲಿರುವ ಕಣೇಕಲ್ ಬಸ್‌ಸ್ಟ್ಯಾಂಡ್ ಬಹಳ ವರ್ಷಗಳ ಬಸ್‌ನಿಲ್ದಾಣವಾಗಿದ್ದು, ನಗರದ ಮಿಲ್ಲರ್‌ಪೇಟೆ ರಸ್ತೆ, (ಪಿ.ಡಬ್ಲ್ಯೂ.ಡಿ.ಗೆ ಸಂಬಂಧಪಟ್ಟ ಕಲ್ಯಾಣದುರ್ಗ ರಸ್ತೆ), ಈ ಮಿಲ್ಲರ್‌ಪೇಟೆ ರಸ್ತೆ ಹದಗೆಟ್ಟಿದ್ದು, ಈಗ ಹೊಸದಾಗಿ 30ಅಡಿ ರಸ್ತೆ ಆಗಿದೆ. ಈ ರಸ್ತೆಯಲ್ಲಿ ಸಂಚಾರ ಬಹಳಷ್ಟು ಇರುತ್ತದೆ. ಇದರಿಂದ ದಯಮಾಡಿ ಕಣೇಕಲ್ ಬಸ್ ನಿಲ್ದಾಣವನ್ನು ಮುಂದೆ ಆರ್ಕಾಗೇಟ್ ವೃತ್ತದ (ಅಂದ್ರಾಳು ಸರ್ಕಲ್) ಹತ್ತಿರ ಸ್ಥಳಾಂತರಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ.  

ಕಾರಣ ಹಿಂದಿನ ಜನಸಂಖ್ಯೆಗೆ ಅನುಗುಣವಾಗಿ ಕಣೇಕಲ್ ಬಸ್‌ನಿಲ್ದಾಣದಿಂದ ಈ ಹಿಂದೆ ಯಾವುದೇ ರೀತಿಯ ಸಂಚಾರಿ ತೊಂದರೆಯಿದ್ದಿಲ್ಲ. ಆದರೆ ಈಗ ಜನಸಂಖ್ಯೆ ಹೆಚ್ಚಾಗಿದ್ದು, ಈ ರಸ್ತೆಯಲ್ಲಿ ಈಗ ಸಂಚಾರ ಹೆಚ್ಚಾಗಿದ್ದು, ಸದರಿ ಬಸ್ ನಿಲ್ದಾಣದ ಹತ್ತಿರವೇ ಆಟೋಗಳು, ಎತ್ತಿನ ಬಂಡಿಗಳು, ಹೂ-ಹಣ್ಣು ಬಂಡಿಗಳು, ಹಾಗೂ ಇನ್ನಿತರೆ ಬಂಡಿಗಳು ಇಲ್ಲಿಯೇ ನಿಲ್ಲುವುದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೇ ಖಾಸಗೀ ಬಸ್‌ಗಳು ಹಾಗೂ ಸರ್ಕಾರಿ ಬಸ್‌ಗಳು ನಿಲ್ಲುವುದರಿಂದ ಎಲ್ಲರಿಗೂ ತೊಂದರೆಯುಂಟಾಗುತ್ತಿದೆ.  

ಈಗ ರಸ್ತೆ ಕಾಮಗಾರಿ (ರಸ್ತೆ ಹಾಕಿದ) ಮುಗಿದು ರಸ್ತೆ ಚೆನ್ನಾಗಿರುವ ಕಾರಣದಿಂದ ದ್ವಿ-ಚಕ್ರ ವಾಹನ, ಹಾಗೂ ಲಘು ವಾಹನಗಳು ಬಹಳ ಸ್ಪೀಡಾಗಿ ಚಲಾಯಿಸುತ್ತಿರುವುದರಿಂದ ಯಾರಿಗೂ ಭದ್ರತೆಯಿಲ್ಲದಂತಾಗಿದೆ. ಹಾಗೂ ಇನ್ನಿತರೆ ಕಾರಣಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸುಗಮ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.  

ಆದ್ದರಿಂದ ತಾವುಗಳು ದಯಮಾಡಿ ಬಳ್ಳಾರಿ ನಗರದಲ್ಲಿರುವ ಕಣೇಕಲ್ ಬಸ್ (ಪಿ.ಡಬ್ಲ್ಯೂ.ಡಿ.ಗೆ ಸಂಬಂಧಪಟ್ಟ ಕಲ್ಯಾಣದುರ್ಗ ರಸ್ತೆ) ನಿಲ್ದಾಣವನ್ನು ಮುಂದೆ ಆರ್ಕಾಗೇಟ್ ವೃತ್ತದ (ಅಂದ್ರಾಳು ಸರ್ಕಲ್) ಹತ್ತಿರ ಸ್ಥಳಾಂತರಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ. 


ಸುದ್ದಿ ಓದಿ