ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಮನವಿ
ಬಳ್ಳಾರಿ 11: ನಗರದ ಹೃದಯ ಭಾಗದಲ್ಲಿರುವ ವಡ್ಡರಬಂಡೆಯಲ್ಲಿ ಬಹುತೇಕ ಬಡವರು, ದುಡಿಯುವ ಜನರೇ ವಾಸವಾಗಿದ್ದು, ಮೂಲ ಸೌಕರ್ಯದ ಕೊರೆತೆಯಿಂದ ಶೋಚನೀಯ ಪರಿಸ್ಥಿತಿಗೆ ಅನುಭವಿಸುತ್ತಿದ್ದಾರೆ. ಒಳಚರಂಡಿ ರಿಪೇರಿ ಮಾಡಿ 6 ಇಂಚಿನ ಪೈಪ್ ಹಾಕಲಾಗಿತ್ತು. ಆದರೆ ಅದು ಸಾಲದೆ ಚರಂಡಿ ನೀರು ಹೊರಗೆ ಬರುತ್ತಿದೆ.
ಇದರಿಂದ ಜನರು, ಮಕ್ಕಳು, ವೃದ್ದರು, ಡೆಂಗ್ಯು, ಮಲೇರಿಯಾದಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಕೆಯುಡಬ್ಲ್ಯೂಎಸ್ ಅಧಿಕಾರಿಗಳಿಗೆ ಈ ಹಿಂದೆ ಮನವಿ ಪತ್ರ ಸಲ್ಲಿಸಲಾಗಿತ್ತು. ರಸ್ತೆ ರೀಪೇರಿ ಮಾಡುವಂತೆ ಮಹಾನಗರಪಾಲಿಕೆಗೆ ಮನವಿ ಸಲ್ಲಿಸಲಾಗಿತ್ತು, ವಡ್ಡರಬಂಡೆಯ ಬಡಾವಣೆಗೆ ತಾವು ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದು ಬಹಳ ಸಂತೋಷದ ವಿಷಯ. ಇದಾದ ನಂತರವೂ ಮಹಾನಗರಪಾಲಿಕೆಗೆ ಬಿಎನ್ಎಚ್ಎಸ್ ನಿಂದ ಮನವಿ ಸಲ್ಲಿಸಲಾಗಿತ್ತು. ಇಷ್ಟಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ವಡ್ಡರ ಬಂಡೆಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಹಾಗಾಗಿ ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಮನವಿ ಮಾಡಿದರು.