ಬಳ್ಳಾರಿ

ಬಡವರಿಗೆ ನಿವೇಶನ ಮತ್ತು ವಸತಿ ನೀಡುವಂತೆ ಮನವಿ

ಬಡವರಿಗೆ ನಿವೇಶನ ಮತ್ತು ವಸತಿ ನೀಡುವಂತೆ ಮನವಿ

ಬಳ್ಳಾರಿ 08 : ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅನೇಕ ಜನರು ಚರಂಡಿ ಪಕ್ಕದಲ್ಲಿ ಮತ್ತು ರಸ್ತೆ ಪಕ್ಕದಲ್ಲಿ, ಬಾಡಿಗೆ ಮನೆಗಳಲ್ಲಿ ಅವಿಭಕ್ತ ಕುಟುಂಬಗಳಲ್ಲಿ, ವಾಸ ಮಾಡುತ್ತಿದ್ದು, ಸರ್ಕಾರಕ್ಕೆ ಹಲವಾರು ಸಹ ಮನವಿಯನ್ನು ಸಲ್ಲಿಸಿದ್ದರು, ಇದುವರೆಗೂ ಇವರಿಗೆ ಯಾವುದೇ ರೀತಿಯ ನಿವೇಶನವಾಗಲಿ ಅಥವಾ ವಸತಿಯಾಗಲಿ ನೀಡಿರುವುದಿಲ್ಲ. ಕೊಳಗಲ್ಲು ಗ್ರಾಮದಲ್ಲಿ ಸುಮಾರು 400ರಕ್ಕೂ ಹೆಚ್ಚಿನ ಕುಟುಂಬಗಳು ವಾಸಮಾಡುವುದಕ್ಕೆ ತುಂಬಾ ಕಷ್ಟಕರವಾಗಿರುವ ಈ ದಿನಗಳಲ್ಲಿ ವಾಸಮಾಡುವುದಕ್ಕೆ ಬಹಳಷ್ಟು ತೊಂದರೆಯಾಗಿರುತ್ತದೆ. 

ಆದರೆ ಕೊಳಗಲ್ಲು ಗ್ರಾಮದಲ್ಲಿ ಬಹಳಷ್ಟು ಜನರ ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ, ಪ.ಪಂಗಡದವರು ಹೆಚ್ಚಿನ ಮಟ್ಟದಲ್ಲಿದ್ದು, ಈ ಜನರಿಗೆ ಬಾಡಿಗೆ ಸಹ ಕಟ್ಟಲಾಗದ ಪರಿಸ್ಥಿತಿಯು ಉಂಟಾಗಿರುತ್ತದೆ, ಆದ್ದರಿಂದ ಕೊಳಗಲ್ಲು ಗ್ರಾಮದಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಬಹಳಷ್ಟು ಸರ್ಕಾರಿ ಜಮೀನುಗಳು ಇದ್ದು ಈಗಾಗಲೇ ಹಿಂದೆ 2013ರಿಂದ ಸತತವಾಗಿ ಗ್ರಾಮ ಪಂಚಾಯಿತಿ ಮುಂದೆ ಹೋರಾಟವನ್ನು ಮಾಡುತ್ತಾ ಬಂದಿದ್ದು, ಇತ್ತೀಚಿನ ದಿನದಿಂದ 2019-20ನೇ ಸಾಲಿನಲ್ಲಿ ಸಹ ಗ್ರಾಮ ಪಂಚಾಯಿತಿ ನಿವೇಶನ ಕುರಿತು ಅರ್ಜಿಗಳನ್ನು ಸಹ ಸಲ್ಲಿಸಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ತುಂಬಾ ಬೇಸರದ ಸಂಗತಿಯಾಗಿದ್ದು, ಆದ್ದರಿಂದ ಅಧಿಕಾರಿಗಳು ಈ ಸ್ಥಳಗಳನ್ನು ಪರೀಶೀಲಿಸಿ ಬಡವರಿಗೆ ನಿವೇಶನ ಮತ್ತು ವಸತಿ ನೀಡುವಂತೆ  ಎ.ಐ.ವೈ.ಎಫ್‌. ತಾಲೂಕು ಸಮಿತಿವತಿಯಿಂದ ಮನವಿ ಮಾಡಲಾಯಿತು. 


ಸುದ್ದಿ ಓದಿ