ಪದವಿ ಪರೀಕ್ಷೆಯನ್ನು ಮುಂದೂಡಲು ಮನವಿ
ಬಳ್ಳಾರಿ 17: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ನಗರ ಶಾಖೆ ವತಿಯಿಂದ ದಿ. 16ರಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಕುಲಸಚಿವರಿಗೆ ಬಸ್ ಮುಷ್ಕರದಿಂದ ಅಸಂಖ್ಯಾತ ಪದವಿ ವಿದ್ಯಾರ್ಥಿಗಳಿಗೆ ತೊಂದರೆಯಾಗುವಂತಾಗಿದೆ. ಆದ ಕಾರಣ ಪದವಿ ಪರೀಕ್ಷೆಯನ್ನು ಮುಂದೂಡಲು ಅ.ಭಾ.ವಿ.ಪ ಮನವಿ ಸಲ್ಲಿಸಿತು. ಸದರಿ ಮನವಿಗೆ ಸ್ಪಂದಿಸಿದ ವಿಶ್ವ ವಿದ್ಯಾಲಯ ದಿ.17ರಂದು ಪರೀಕ್ಷೆಗಳನ್ನು ಮುಂದೂಡಿ ಸುತ್ತೋಲೆಯನ್ನು ಹೊರಡಿಸಿರುತ್ತದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಳ್ಳಾರಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದೂಡಿದ ವಿಶ್ವ ವಿದ್ಯಾಲಯದ ಕ್ರಮವನ್ನು ಸ್ವಾಗತಿಸುತ್ತದೆ.