ಬಳ್ಳಾರಿ

ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ಮುಂದೂಡಲು ಒತ್ತಾಯಿಸಿ ಮನವಿ

ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ಮುಂದೂಡಲು ಒತ್ತಾಯಿಸಿ ಮನವಿ

ಬಳ್ಳಾರಿ 22: ಇಡೀ ರಾಜ್ಯದಲ್ಲಿ ಆಗಸ್ಟ್‌ ತಿಂಗಳಲ್ಲಿ ಪರೀಕ್ಷೆ ನಿಗದಿಯಾಗಿದ್ದರೂ ಬಳ್ಳಾರಿ ವಿವಿ ಮಾತ್ರ ಪರೀಕ್ಷೆ ಮುಂದೂಡುವುದು ಸಾಧ್ಯವಿಲ್ಲ ಎಂಬ ನಿಲುವನ್ನು ತಾಳಿರುವುದು ವಿದ್ಯಾರ್ಥಿಗಳಿಗೆ ತೀವ್ರ ಸಂಕಷ್ಟ ಉಂಟು ಮಾಡಿದೆ.  ಜುಲೈ 26ರಂದು ಇರುವ ಬೆಸ ಸೆಮಿಸ್ಟರ್ ಪರೀಕ್ಷೆಗಳನ್ನು ಏಕೆ ಮುಂದೂಡಬೇಕು. ವಿದ್ಯಾರ್ಥಿಗಳು ಲಾಕ್‌ಡೌನ್‌ನಲ್ಲಿ 3-4 ತಿಂಗಳುಗಳ ಕಾಲ ಕಾಲೇಜುಗಳಿಗೆ ಹಾಜರಾಗಲಾಗಿರುವುದಿಲ್ಲ. ಎಷ್ಟೋ ವಿದ್ಯಾರ್ಥಿಗಳು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ತಂದೆ ತಾಯಂದಿರನ್ನು ಕಳೆದುಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ಕುಟುಂಬದ ಹೊಟ್ಟೆ ಪಾಡಿಗಾಗಿ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿಗಳು, ಗಾರೆ ಕೆಲಸ ಮಾಡಿದ ವಿದ್ಯಾರ್ಥಿಗಳು ಈಗ ಕೆಲವು ದಿನಗಳ ಕಾಲ ಕಾಲೇಜುಗಳಿಗೆ ಬಂದು ಅವರ ಮನಸ್ಥಿತಿ ವಿದ್ಯಾಭ್ಯಾಸದೆಡೆಗೆ ಹೊಂದಾಣಿಕೆಯಾಗಬೇಕಿದೆ. ಕಾಲೇಜಿಗೆ ಬಂದ ದಿನವೇ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಬರಿಯಲು ಆಗುವುದಿಲ್ಲ. ಹಾಗಾಗಿ ರೀವೀಷನ್ ತರಗತಿಗಳನ್ನು ನಡೆಸಿ ನಂತರ ಪರೀಕ್ಷೆಗಳನ್ನಿಡಬೇಕು. ಈ ತಿಂಗಳ 16ನೇ ತಾರೀಖಿನವರೆಗೆ ಸಮ ಸೆಮಿಸ್ಟರ್‌ಗಳ ತರಗತಿಗಳನ್ನು ನಡೆಸಲಾಗುತ್ತಿತ್ತು. ಅಸೈನ್‌ಮೆಂಟ್ ನೀಡಲಾಗಿತ್ತು ಹಾಗೂ ಕೆಲವು ಆಂತರಿಕೆ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿತ್ತು. ಈಗ 3-4 ತಿಂಗಳುಗಳ ಹಿಂದೆ ಕೇಳಿದ್ದ ಪಾಠಗಳನ್ನು ಅಭ್ಯಸಿಸಲು ಸಮಯಾವಕಾಶ ಬೇಕಾಗಿದೆ. ಇಲ್ಲಿಯವರೆಗೂ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಶೇಕಡಾ. 65ಅರಷ್ಟು ಮಾತ್ರ ವ್ಯಾಕ್ಸಿನೇಷನ್ ಆಗಿದ್ದು ಇನ್ನು ಶೇಕಡಾ 35ಅ ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಷನ್ ಆಗುವುದು ಬಾಕಿಯಿದೆ. ಹಾಗಾಗಿ ಪರೀಕ್ಷೆಗಳನ್ನು ಮುಂದೂಡಿ 100ಅ ವ್ಯಾಕ್ಸಿನೇಷನ್ ಆದ ನಂತರವೇ ಪರೀಕ್ಷೆಗಳನ್ನು ಪ್ರಾರಂಭಿಸಬೇಕು. ಸಾರಿಗೆ ಇಲಾಖೆ ಇದುವರೆಗೂ ಅನೇಕ ಹಳ್ಳಿಗಳಿಗೆ ಬಸ್ ಸಂಚಾರವನ್ನು ಮೊದಲಿನಂತೆ ಪ್ರಾರಂಭಿಸಿಲ್ಲ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಬೆಸ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಬೇಕು ಹಾಗೂ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಸೆಮಿಸ್ಟರ್‌ನ ಪರೀಕ್ಷೆಗಳನ್ನು ನಡೆಸಬೇಕೆಂದು ಎಐಡಿಎಸ್‌ಓ  ವಿಶ್ವವಿದ್ಯಾಲಯಕ್ಕೆ ಮನವಿ ಮಾಡುತ್ತದೆ.  

ಸಂಘಟನೆಯ  ಮುಖಂಡ,  ಶರಣು ಪಾಟೀಲ್, ಗಂಗರಾಜು ಅಳ್ಳಳ್ಳಿ, ಶರಣು ಗಡ್ಡಿ, ಅಂತಿಮ ವರ್ಷದ ವಿದ್ಯಾರ್ಥಿಳಾದ ಸಚಿನ್ ಶ್ರೀನಿವಾಸ್ ವಿರುಪಾಕ್ಷಿ ಪ್ರವೀಣ್, ಕೃಷ್ಣ, ಮಹೇಶ್, ಉಮೇಶ್,ರಮೇಶ್,  ಮುತ್ತು ಇನ್ನು ಅನೇಕರು ಇದ್ದರು. 


ಸುದ್ದಿ ಓದಿ