ಸರ್ಕಾರಿ ನಿವೇಶನದ ಹಕ್ಕು ಪತ್ರ ನೀಡಲು ಮನವಿ
ಬಳ್ಳಾರಿ 20: ಬಳ್ಳಾರಿ ಜಿಲ್ಲಾ ಕುರುಗೋಡು (ಕಂಪ್ಲಿ) ತಾಲೂಕಿನ ನೆಲ್ಲುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ವೇ ನಂ 225/ಎ3 ಪೈಕಿ ವಿಸ್ತೀರ್ಣ 5.00 ಎಕರೆ ಸರ್ಕಾರಿ ಜಮೀನಿನಲ್ಲಿ ಸುಮಾರು 30ರಿಂದ 35ವರ್ಷಗಳಿಂದ ಜೀವನ ಮಾಡುತ್ತಿದ್ದೇವೆ. ನಮಗೆ ಇಲ್ಲಿಯವರೆಗೂ ಯಾವುದೇ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಹಕ್ಕು ಪತ್ರಗಳನ್ನು ನೀಡಿರುವುದಿಲ್ಲ. ಇದರಿಂದ ನಮಗೆ ಮನೆಕಟ್ಟಿಕೊಳ್ಳು ಮತ್ತು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಹಾಗೂ ಯಾವುದೇ ಸರ್ಕಾರದಿಂದ ನೀರು, ವಿದ್ಯುತ್ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ನಮಗೆ ನಿವೇಶನದ ಹಕ್ಕು ಪತ್ರಗಳನ್ನು ನೀಡಿ ನಮ್ಮ ಜೀವನಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೋರಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೈನಾಬಿ, ಮಂಗಳಗೌರಿ, ಮುತ್ತಮ್ಮ, ಸುವರ್ಣ, ರಾಜಮ್ಮ, ನೀಲಮ್ಮ, ಈರಮ್ಮ, ಲಕ್ಷ್ಮಿ, ಮಾಬುನ್ನಿ, ಅಬ್ದುಲ್ ರಫೀಕ್, ಮೌಲಾಸಾಬ್, ದಾದಾವಲಿ, ಬಿ ಸಿದ್ದಲಿಂಗ, ಶರಣಪ್ಪ, ಶೀನು, ಜೀಲಾನ್ಬಾಷಾ, ಬಸಮ್ಮ, ಅಂಜಿನಮ್ಮ, ದುರುಗಮ್ಮ ಸೇರಿದಂತೆ ನೂರಾರು ಜನರು ಇದ್ದರು.