ಬಾರದ ಮಾಸಾಶನ: ಪರಿಹಾರ ನೀಡಲು ಆಗ್ರಹ
ಕಂಪ್ಲಿ 21: ಸರಕಾರ ಕಳೆದ ಒಂದು ವರ್ಷದಿಂದ ಸಾಮಾಜಿಕ ಭದ್ರತೆ ಯೋಜನಡಿಯ ಮಾಸಾಶನಗಳು ಫಲಾನುಭವಿಗಳಿಗೆ ಸರಿಯಾಗಿ ವಿತರಣೆಯಾಗದೆ ಜೀವನ ನಡೆಸಲು ಬಹಳ ತೊಂದರೆಯಾಗಿದ್ದು, ಕೂಡಲೇ ವಿತರಿಸುವಲ್ಲಿ ಕಂದಾಯ ಸಚಿವರು ತುರ್ತು ಕ್ರಮ ಕೈಗೊಳ್ಳುವಂತೆ ಕಂಪ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣ ಎಸ್.ಪೋಳ್ ಹೇಳಿದರು.
ಕಂಪ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿಯವರು ತಹಸೀಲ್ದಾರ್ ಕಚೇರಿಯ ಶಿರಸ್ತೆದಾರ್ ಪಂಪಾಪತಿ ಇವರಿಗೆ ಗುರುವಾರ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸುವಲ್ಲಿ ಕಂಪ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಎಂ.ಉಸ್ಮಾನ್, ಟಿ.ಎಚ್.ಎಂ.ರಾಜಕುಮಾರ್, ಎಂ.ಚಂದ್ರಶೇಖರ್, ಡೆಕೋರೇಟರ್ ನಾಗರಾಜ್, ಕೆ.ಮೆಹಬೂಬ್, ಇಸ್ಮಾಯಿಲ್ ಬೇಗ್, ಬಿ.ಹರ್ಷವರ್ಧನರೆಡ್ಡಿ, ಫ್ರಾನ್ಸೀಸ್, ಕಟ್ಟೆ ವೀರೇಶ್, ಅದ್ದಪ್ಪ ತಿಮ್ಮಪ್ಪ, ಬೆಟ್ಟದ ರಮೇಶ್, ಧನರಾಜ್, ಮಂಗಳಮುಖಿಯರಾದ ಅಮೃತಾ, ಸೋನು, ಅಂಜಲಿ, ಶ್ವೇತಾ, ಗೊಂಬೆ ಸೇರಿ ಮಾಶಾಸನ ಪಡೆಯುವ ಫಲಾನುಭವಿಗಳಿದ್ದರು.
ಮಾಶಾಸನ ವಿತರಿಸುವಂತೆ ಆಗ್ರಹಿಸಿ ಶಿರಸ್ತೆದಾರ್ ಪಂಪಾಪತಿ ಇವರಿಗೆ ಕಂಪ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣ ಎಸ್.ಪೋಳ್ ಮನವಿ ಸಲ್ಲಿಸಿದರು.