ವಡ್ಡರ ಯಲ್ಲಣ್ಣನಿಗೆ ಸೂಕ್ತ ಗೌರವ ನೀಡಲು ಒತ್ತಾಯಿಸಿ ಮನವಿ
ಲೋಕದರ್ಶನ ವರದಿ
ಬೈಲಹೊಂಗಲ 07: ಕಿತ್ತೂರ ಉತ್ಸವ ಮತ್ತು ರಾಯಣ್ಣನ ಉತ್ಸವದಲ್ಲಿ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಬಲಗೈ ಬಂಟನಾಗಿದ್ದ ವಡ್ಡರ ಯಲ್ಲಣ್ಣನಿಗೆ ಸೂಕ್ತ ಗೌರವ ನೀಡಬೇಕೆಂದು ಒತ್ತಾಯಿಸಿ ಶುಕ್ರವಾರ ಕಿತ್ತೂರ ಹಾಗೂ ಬೆಳವಡಿ ವ್ಯಾಪ್ತಿಯ ವಡ್ಡರ ಯಲ್ಲಣ್ಣನ ಅಭಿಮಾನಿ ಬಳಗದ ವತಿಯಿಂದ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ರಾಣಿ ಚೆನ್ನಮ್ಮನ ಸೈನ್ಯದಲ್ಲಿ ವಡ್ಡರ ಯಲ್ಲಣ್ಣನು ತನ್ನ ಶಬ್ದವೇದಿ ತಂತ್ರವನ್ನು ಅರಿತು ಶತ್ರು ಸೈನ್ಯಗಳ ಮಾಹಿತಿ ಗ್ರಹಿಸಿ ಸೋಲಿಸುವದರದಲ್ಲಿ ಅವನ ಪಾತ್ರ ಮುಖ್ಯವಾಗಿತ್ತು. ಅವನು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿದ್ದು ಅವನಿಗೂ ಸೂಕ್ತ ಗೌರವ ನೀಡಬೇಕು. ವಡ್ಡರ ಯಲ್ಲಣ್ಣನ ಭಾವಚಿತ್ರವನ್ನು ಉತ್ಸವದ ಆಮಂತ್ರಣ ಪತ್ರಿಕೆ ಮತ್ತು ಉತ್ಸವದ ವೇದಿಕೆಯ ಬ್ಯಾನರಲ್ಲಿ ಆಳವಡಿಸಬೇಕು. ಕಿತ್ತೂರು ಉತ್ಸವದಲ್ಲಿ ಮೂರು ವೇದಿಕೆಗಳಲ್ಲಿ ಒಂದಕ್ಕೆ ವಡ್ಡರ ಯಲ್ಲಣ್ಣ ಅವರ ಹೆಸರಿಡಬೇಕು. ರಾಷ್ರ್ಟೀಯ ಹೆದ್ದಾರಿ ಪಕ್ಕದಲ್ಲಿರುವ ರಾಣಿ ಚೆನ್ನಮ್ಮನ ಆಶ್ವಾರೂಡ ಮೂರ್ತಿಯ ಪಕ್ಕದಲ್ಲಿ ರಾಯಣ್ಣ, ಅಮಟೂರ ಬಾಳಪ್ಪ ಪುತ್ಥಳಿಗಳನ್ನು ಸ್ಥಾಪಿಸಿದಂತೆ ವಡ್ಡರ ಯಲ್ಲಣ್ಣನ ಮೂರ್ತಿ ಸ್ಥಾಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಾರುತಿ ಕಲ್ಲವಡ್ಡರ, ಫಕೀರ್ಪ ಬಂಡಿವಡ್ಡರ, ಅರ್ಜುನ ಕಲ್ಲವಡ್ಡರ, ಅಶೋಕ ಅಸುರೆ, ದುರಗಪ್ಪ ಕಲ್ಲವಡ್ಡರ, ಮಲ್ಲಿಕಾರ್ಜುನ ಕಲ್ಲವಡ್ಡರ, ಲಕ್ಷ್ಮಣ ಬಂಡಿವಡ್ಡರ, ಹನುಮಂತ ಬಂಡಿವಡ್ಡರ, ಬಸು ಮನ್ನವಡ್ಡರ, ಯಲ್ಲಪ್ಪ ಬಂಕಾಪುರ, ಹನುಮಂತ ಕಲ್ಲವಡ್ಡರ, ವಿರೇಶ ಎಕ್ಕೆರಿ, ಬಾಲಪ್ಪ ದೊಡಮನಿ, ಸುರೇಶ ಸುರೇಬಾನ, ಹನುಮಂತ ಸಾಲಹಳ್ಳಿ, ಸುರೇಶ ಮೂಲಂಗಿ, ಈರಣ್ಣ ಕಟ್ಟಿಮನಿ, ಬಸವರಾಜ ನರೇಗಲ್ಲ, ರಾಮಚಂದ್ರ ಉಡಿಕೇರಿ, ಲಕ್ಷಣ ನಂದಿ ಅರ್ಜುನ ಎಕ್ಕೇರಿ ಇದ್ದರು.