ಮುಂದಗೋಡ

ಕೊಳಚೆ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಮನವಿ

ಕೊಳಚೆ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಮನವಿ

ಲೋಕದರ್ಶನ ವರದಿ 

ಮುಂಡಗೋಡ:ಪಟ್ಟಣದ ಆನಂದನಗರ ಮತ್ತು ಇಂದಿರಾನಗರಗಳನ್ನು ಕೊಳಚೆ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಪಪಂ.ಮುಖ್ಯಾಧಿಕಾರಿಗಳಿಗೆ ನಿವಾಸಿಗಳು ಮನವಿ ಸಲ್ಲಿಸಿದರು. 

ಆನಂದನಗರ ಮತ್ತು ಇಂದಿರಾನಗರ ವಾರ್ಡ್‌ಗಳು ಹಿಂದುಳಿದ ವರ್ಗದ, ಅಲ್ಪಸಂಖ್ಯಾತ ಮತ್ತು ಎಸ್‌ಸಿ/ಎಸ್‌ಟಿ ಜನಾಂಗದವರು ಇರುವ ಪ್ರದೇಶಗಳಾಗಿವೆ. ಅಭಿವೃದ್ಧಿ ಕಾಣದೆ ಸ್ವಚ್ಛತೆ ಇಲ್ಲದೆ ಜನರ ಅಭಿವೃದ್ಧಿ ಆಗಿರುವುದಿಲ್ಲ. ಸರಕಾರದ ಎಲ್ಲ ಅನುಕೂಲ ಪಡೆಯಲು ಈ ಪ್ರದೇಶವನ್ನು ಕೊಳಚೆ ಪ್ರದೇಶ ಎಂದು ಘೋಷಿಸಬೇಕು ಎಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಈ ಬಗ್ಗೆ ಪರೀಶೀಲಿಸಿ ಕಾರ್ಮಿಕ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. 

ಈ ವೇಳೆ ಪ.ಪಂ.ಉಪಾಧ್ಯಕ್ಷ ಶ್ರೀಕಾಂತ ಸಾನು, ಸದಸ್ಯ ಅಶೋಕ ಚಲವಾದಿ, ಮಾಜಿ ಅಧ್ಯಕ್ಷ ಹುಲಗಪ್ಪ ಭೋವಿ, ಸದಸ್ಯ ಮಹಮ್ಮದ್‌ಜಾಫರ್ ಹಂಡಿ, ಲಕ್ಷ್ಮೀ ನಾಯ್ಕ, ಪಾರ್ವತಿ ಸಿಂಧೋಗಿ, ಶಂಕ್ರವ್ವಾ, ಪರಶುರಾಮ ಮಾಳದಕರ, ಆನಂದ ಭೋವಿ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ